ಬೆಳ್ಳಾರೆ ಮನೆ ದರೋಡೆ ಆರೋಪಿ ಸೆರೆ

Spread the love

ಬೆಳ್ಳಾರೆ ಮನೆ ದರೋಡೆ ಆರೋಪಿ ಸೆರೆ

ಸುಳ್ಯ: ಮನೆಯ ಬೀಗು ಮುರಿದು ಒಳ ಪ್ರವೇಶಿಸಿ ಚಿನ್ನ ಹಾಗೂ ಇತರ ವಸ್ತುಗಳನ್ನು ದೋಚಿದ ವ್ಯಕ್ತಿಯನ್ನು ಬೆಳ್ಳಾರೆ ಪೋಲಿಸರು ಬಂಧಿಸಿದ್ದಾರೆ.

ಬಂಧಿತನ್ನು ಸುಳ್ಯ ರಾಮಕುಮೇರಿ ನಿವಾಸಿ ಜಗದೀಶ್ ಬಿನ್ ತಂಬಯ್ಯ(23) ಎಂದು ಗುರುತಿಸಲಾಗಿದೆ.
ಜುಲೈ 25ರಂದು ಸುಳ್ಯದ ಸತ್ಯನಾರಾಯಣ ಅವರ ಮನೆಗೆ ಯಾರೋ ಕಳ್ಳರು ಮನೆಯ ಮುಂಬಾಗಿಲಿನ ಬೀಗವನ್ನು ತೆರೆದು ಒಳ ಪ್ರವೇಶಿಸಿ ಹಾಲ್ ನಲ್ಲಿದ್ದ ಬೀರುವಿನ ಬಾಗಿಲನ್ನು ಪಕ್ಕದ ಶೆಲ್ಫ್ ನಲ್ಲಿದ್ದ ಕೀಯಿಂದ ತೆರೆದು ಲಾಕರ್ ನ ಬೀಗವನ್ನು ಮುರಿದು ಅದರೊಳಗಿದ್ದ ನಗದು ಹಣ 26500 ರೂ,ಮತ್ತು 6 ಪವನ್ ಚಿನ್ನದ ಒಡವೆಗಳು (ಅದರ ಅಂದಾಜು ಮೌಲ್ಯ ಒಂದು ಲಕ್ಷ ರೂ) ಕಳವು ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು.

ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೋಲಿಸರು ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ ಕಳವು ಮಾಡಿದ್ದ ನಗದು26500 ರೂ ಹಾಗೂ 6 ಪವನ್ ಚಿನ್ನ ದ ಒಡವೆಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡಿರುತ್ತಾರೆ.

ಪೊಲೀಸ್ ಅಧೀಕ್ಷಕರಾದ ಡಾ ಬಿ.ಆರ್.ರವಿಕಾಂತೇಗೌಡ IPSರವರ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಜೀತ್ ರವರು,ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಆರ್ ಸತೀಶ್ ಕುಮಾರ್,ಬೆಳ್ಳಾರೆ ಈರಯ್ಯಡಿ.ಎನ್, ಸಿಬ್ಬಂದಿಗಳಾದ , ಭಾಸ್ಕರ್, ಸುಧಾಕರ್, ಬಾಲಕೃಷ್ಣ, ಸತೀಶ್, ಚಂದ್ರಶೇಖರ್, ಮಂಜುನಾಥ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love