ಬೇಸಿಕ್ ಶಿಖಾರೋಹಣ ಕೋರ್ಸ್ ಪದವಿ ಪಡೆದ ಆಳ್ವಾಸ್ ವಿದ್ಯಾರ್ಥಿಗಳು

Spread the love

ಬೇಸಿಕ್ ಶಿಖಾರೋಹಣ ಕೋರ್ಸ್ ಪದವಿ ಪಡೆದ ಆಳ್ವಾಸ್ ವಿದ್ಯಾರ್ಥಿಗಳು

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಕೆಡೆಟ್, ಕೀರ್ತಿನಾಥ್ ಹಾಗೂ ವಿಕಾಸ್ ಎಂ., ಮಾ.2ರಿಂದ 29ರವರೆಗೆ ಡಾರ್ಜಿಲಿಂಗ್‍ನಲ್ಲಿ ನಡೆದ ಅಖಿಲ ಭಾರತ ಶಿಖಾರೋಹಣ ಶಿಬಿರದಲ್ಲಿ ಭಾಗವಹಿಸಿದರು.

ಕೀರ್ತಿನಾಥ್ ಅವರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಹಾಗೂ ವಿಕಾಸ್.ಎಂ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಿಖಾರೋಹಣ ಶಿಬಿರದಲ್ಲಿ ಹಿಮಾಲಯ ಪರ್ವತದಲ್ಲಿ ರೊಕ್ ಕ್ಲಮಿಂಗ್, ರ್ಯಾಪೆಲ್ಲಿಂಗ್, ಲೀಡ್ ಕ್ಲಮಿಂಗ್ ಸಹಿತ ತರಬೇತಿಯಲ್ಲಿ ಪಾಲ್ಗೊಂಡರು.

ಕೆಡೆಟ್‍ಗಳ ದೈಹಿಕ ಪರೀಕ್ಷೆಯ ಬಳಿಕ ಪಂದಮ್ ಟೀ ಎಸ್ಟೆಟ್‍ಗೆ 14 ಕಿ.ಮೀ ಟ್ರಕ್ಕಿಂಗ್ ನಡೆಸಿದರು. ಮೆಡಿಕಲ್ ಫಿಟ್‍ನೆಸ್ ಟೆಸ್ಟ್ ಬಳಿಕ ವೆಸ್ಟ್ ಸಿಕ್ಕಿಂನ ಯುಕ್ಸೊಂಗೆ ಟ್ರಕ್ಕಿಂಗ್ ನಡೆಸಿದರು. ಚೌರಿಖಾಂಗ್ ಬೇಸ್ ಕ್ಯಾಂಪ್‍ಗೆ ತ್ಸುಂಕಾ ಹಾಗೂ ಡಿಜೊಂಗ್ರಿ ಮುಖೇನ 14,600 ಫೀಟ್ ಎತ್ತರದ ಪ್ರದೇಶವನ್ನು ಕ್ರಮಿಸಿದರು. ಬಳಿಕ ಕೆಡೆಟ್‍ಗಳು ರಥೋಂಗ್ ಗ್ಲಾಸಿರ್‍ಗೆ 15 ಫೀಟ್ ಕ್ರಮಿಸಿ ಸೆಲ್ಫ್ ಅಕ್ಯಾರಿಂಗ್, ಬೌಲ್ಡರಿಂಗ್, ಜುಮ್ಮರಿಂಗ್, ಲೀಡ್ ಕ್ಲೀಬಿಂಗ್, ಫಿಕ್ಸ್‍ಡ್ ರೋಪ್, ರಪ್ಪೆಲಿಂಗ್, ರೋಪ್ ಫಿಕ್ಸಿಂಗ್ ಚಟುವಟಿಕೆ ನಡೆಸಲಾಯಿತು. 17,500 ಫೀಟ್ ಎತ್ತರದ ರೆನೋಕ್ ಶಿಖರವನ್ನು ಕೆಡೆಟ್‍ಗಳು ಹತ್ತಿದರು.

ಹೀಗೆ ಕೆಡೆಟ್‍ಗಳು ಯುಕ್ಸೊಂನಿಂದ ಚೌರಿಖಾಂಗ್ ಬೇಸ್ ಕ್ಯಾಂಪ್‍ಗೆ ಸುಮಾರು 40 ಮೀ. ಕ್ರಮಿಸಿದರು. ಪ್ರಾಯೋಗಿಕ ಪರೀಕ್ಷೆಯನ್ನು ಗ್ಲಾಸಿರ್‍ನಲ್ಲಿ ನಡೆಸಲಾಯಿತು. ಕೆಡೆಟ್‍ಗಳಿಗೆ ಹಿಮಾಲಯ ಮೌಂಟೆನಿರಿಂಗ್ ಇನ್ಸ್‍ಟಿಟ್ಯೂಟ್ ಲಿಖಿತ ಪರೀಕ್ಷೆ ಹಾಗೂ ಸ್ಪೊರ್ಟ್ ಕ್ಲಬಿಂಗ್ ಅನ್ನು ನಡೆಸಲಾಯಿತು. ಹಿಮಾಲಯ ಮೌಂಟೆನಿರಿಂಗ್ ಇನ್ಸ್‍ಟಿಟ್ಯೂಟ್ ಸಂಸ್ಥೆಯಿಂದ ಕೊನೆಯ ದಿನ ಆಳ್ವಾಸ್‍ನ ಇಬ್ಬರು ಕೆಡೆಟ್‍ಗಳು ಸಹಿತ ಬೇಸಿಕ್ ಶಿಖಾರೋಹಣ ಕೋರ್ಸ್ ಪದವಿ ಪ್ರಮಾಣ ಪತ್ರ ಹಾಗೂ ಬ್ಯಾಡ್ಜ್ ನೀಡಲಾಯಿತು.


Spread the love