ಬೈಂದೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತ್ಯು

Spread the love

ಬೈಂದೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತ್ಯು

ಬೈಂದೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೋರ್ವರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಬೈಂದೂರು ತಾಲೂಕಿನ ಶಿರೂರಿನಲ್ಲಿ ಭಾನುವಾರ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಶಿರೂರು ನಿವಾಸಿ ಇರ್ಷಾದ್ (56) ಎಂದು ಗುರುತಿಸಲಾಗಿದೆ.

 ಮಾಹಿತಿಗಳ ಪ್ರಕಾರ ಶನಿವಾರ ರಾತ್ರಿ ಸುರಿದ ಗಾಳಿ ಮಳೆಗೆ ವಿದ್ಯುತ್ ತಂತಿಯೊಂದ ತುಂಡಾಗಿ ಬಿದ್ದಿದ್ದು, ಭಾನುವಾರ ಬೆಳಿಗ್ಗೆ ಮನೆಯಿಂದ ಇರ್ಷಾದ್ ಅವರು ಮನೆಯಲ್ಲಿ ಸತ್ತಿದ್ದ ಇಲಿಯನ್ನು ಎಸೆಯಲು ಗೇಟ್ ದಾಟಿ ಹೊರಗಡೆ ಬಂದ ಸಮಯದಲ್ಲಿ ದಾರಿ ಮಧ್ಯೆ ನೆಲದ ಮೇಲೆ ತುಂಡಾಗಿ ಬಿದ್ದ ತಂತಿಯನ್ನು ಗಮನಿಸದೆ ತುಳಿದುಕೊಂಡು ಹೋಗಿದ್ದು ಈ ವೇಳೆ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಮತ್ತು ಬೈಂದೂರು ಪೋಲಿಸರು ಭೇಟಿ ನೀಡ ಪರಿಶೀಲನೆ ನಡೆಸಿದ್ದಾರೆ.ತುಂಡಾಗಿ ವಿದ್ಯುತ್ ತಂತಿ ಸರಿಪಡಿಸುವ ಕಾರ್ಯವನ್ನು ಮೆಸ್ಕಾಂ ಸಿಬಂದಿ ನಡೆಸುತ್ತಿದ್ದಾರೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love