ಬೈಂದೂರು – ಶಿರೂರು : ಟಾಟಾ ಏಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ – ಒರ್ವ ಸಾವು

ಬೈಂದೂರು – ಶಿರೂರು : ಟಾಟಾ ಏಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ – ಒರ್ವ ಸಾವು

ಕುಂದಾಪುರ: ಟಾಟಾ ಏಸ್ ಮತ್ತು ಲಾರಿ ಪರಸ್ಪರ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಟಾಟಾ ಏಸ್ ವಾಹನದ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶಿರೂರು ಗ್ರಾಮದ ಶಿರೂರು ಒತ್ತಿನೆಣೆ ಸಮೀಪದ ನೀರ್ಗದ್ದೆ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮೃತ ವ್ಯಕ್ತಿಯನ್ನು ಟಾಟಾ ಏಸ್ ವಾಹನ ಚಾಲಕ ನಾಗೂರು ಸಮೀಪದ ಉಳ್ಳೂರು ನಿವಾಸಿ ವಿ. ಸುನಿಲ್ ಪೂಜಾರಿ ಎಂದು ಗುರುತಿಸಲಾಗಿದೆ.

ಟಾಟಾ ಏಸ್ ವಾಹನ ಭಟ್ಕಳದಿಂದ ಬೈಂದೂರು ಕಡೆಗೆ ತೆರಳುತ್ತಿದ್ದು ಇದೇ ಸಂದರ್ಭ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಪ್ರಯಾಣಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಏಸ್ ವಾಹನದ ಚಾಲಕ ಸುನೀಲ್ ಪೂಜಾರಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಲಾರಿ ಚಾಲಕ ರೌಡಲ್ ಮೌರ್ಯ ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.