ಬೈಕ್ ಕಳ್ಳತನ ಮಾಡಿದ ಇಬ್ಬರು ಆರೋಪಿಗಳ ಬಂಧನ

Spread the love

ಬೈಕ್ ಕಳ್ಳತನ ಮಾಡಿದ ಇಬ್ಬರು ಆರೋಪಿಗಳ ಬಂಧನ

ಮಂಗಳೂರು : ಮಂಗಳೂರು ನಗರದ ಬಾವುಟಗುಡ್ಡೆ ಬಳಿ ಪಾರ್ಕ್ ಮಾಡಿದದ ಹೀರೋ ಹೊಂಡಾ ಮೋಟರ್ ಸೈಕಲನ್ನು ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧೀತರನ್ನು ಕೂಳೂರು ಪಂಜಿಮೊಗರು ನಿವಾಸಿ ಪ್ರವೀಣ್ ಮೊಂತೆರೋ (22) ಮತ್ತು ಬಿಜಿನ್ ಯಾನೆ ವಿಜಯ್ (20) ಎಂದು ಗುರುತಿಸಲಾಗಿದೆ.

ಆರೋಪಿಯಾದ ಪ್ರವೀಣ್ ದಿನಾಂಕ 06.04.2018 ರಂದು ನಗರದ ನ್ಯೂಚಿತ್ರಾ ಬಳಿ ಬರುತ್ತಾನೆ ಎಂಬ ಖಚಿತ ಮಾಹಿತಿಯಂತೆ ವಾಹನ ತಪಾಸಣೆ ಮಾಡುತ್ತಿದ್ದಾಗ ನಂಬರ್ ಪ್ಲೇಟ್ ಇಲ್ಲದೇ ಚಲಾಯಿಸಿಕೊಂಡು ಬರುತ್ತಿದ್ದ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಕಳವು ಗೈದ ವಾಹನವೆಂದು ಖಚಿತ ಪಡಿಸಿ ವಾಹನವನ್ನು ಸ್ವಾದೀನ ಪಡಿಸಿ ಆರೋಪಿ ಪ್ರವೀಣ್ ಮಾಂತೇರೋ ನನ್ನು ದಸ್ತಗಿರಿ ಮಾಡಲಾಯಿತು. ಆರೋಪಿ ಪ್ರವೀಣ್ ಮಾಂತೇರೋ ನೀಡಿದ ಮಾಹಿತಿಯಂತೆ ಇನ್ನೊರ್ವ ಆರೋಪಿ ಬಿಜಿನ್ ಯಾನೆ ವಿಜಯ್ ರವರನ್ನು ಮಂಗಳೂರಿನ ಪದವಿನಂಗಡಿ ಬಳಿ ದಸ್ತಗಿರಿ ಮಾಡಲಾಯಿತು.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಎಂ ಜಗದೀಶ್ ಎ ಸಿ ಪಿ ಕೇಂದ್ರ ಉಪವಿಭಾಗ ರವರ ನೇತೃತ್ವದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ಯೋಗೀಶ್ ಕುಮಾರ್, ಪಿ ಎಸ್ ಐ ಅಪರಾಧ ಅನಂತ ಮುರುಡೇಶ್ವರ, ಎಸ್ ಎಸ್ ಐ ಪದ್ಮನಾಭ, ಸಿಬ್ಬಂದಿಗಳಾದ ವೆಲೆಸ್ಟಿನ್ ಜಾರ್ಜ್ ಡಿ ಸೋಜಾ, ದಯಾನಂದ, ವಾಸು ನಾಯ್ಕ್, ರಮೇಶ್, ಬಸವರಾಜ್, ಸಾಗರ್ ಇವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.


Spread the love