ಬ್ರಹ್ಮರಕೂಟ್ಲು: ಗ್ಯಾಸ್ ಟ್ಯಾಂಕರ್ – ಕಾರು ನಡುವೆ ಭೀಕರ ಅಪಘಾತ; ಐವರು ಮೃತ್ಯು

ಬ್ರಹ್ಮರಕೂಟ್ಲು: ಗ್ಯಾಸ್ ಟ್ಯಾಂಕರ್ – ಕಾರು ನಡುವೆ ಭೀಕರ ಅಪಘಾತ; ಐವರು ಮೃತ್ಯು

ಬಂಟ್ವಾಳ: ಗ್ಯಾಸ್ ಟ್ಯಾಂಕರ್ ಹಾಗು ಟೂರಿಸ್ಟ್ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರಾ.ಹೆದ್ದಾರಿಯ ಬ್ರಹ್ಮರಕೂಟ್ಲು ಟೋಲ್ ಸಮೀಪ ಸಂಭವಿದೆ.

ಧರ್ಮಸ್ಥಳ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಮಂಗಳೂರು ಕಡೆಯಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ತಲಪಾಡಿ – ಬ್ರಹ್ಮರಕೂಟ್ಲು ಮೇಲ್ಸೆತುವೆ ಸಮೀಪ ಢಿಕ್ಕಿಯಾಗಿದೆ.

ಘಟನೆಯಿಂದ ಐವರು ಮೃತಪಟ್ಟಿದ್ದು, ಉಳಿದವರು ಗಂಭಭೀರವಾಗಿ ಗಾಯಗೊಂಡಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಅಪಘಾತದಿಂದ ಹೆದ್ದಾರಿಯಲ್ಲಿ ಕೆಲ ತಾಸುಗಳ ಕಾಲ ಸಂಚಾರಕ್ಕೆ ಉಂಟಾಗಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.