
Spread the love
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆರ್.ಧ್ರುವನಾರಯಣ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
ಉಡುಪಿ: ಶನಿವಾರ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾದ ಆರ್.ಧ್ರುವನಾರಯಣ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜರಗಿತು.
ಬ್ಲಾಕ್ ಅಧ್ಯಕ್ಷರಾದ ದಿನಕರ ಹೇರೂರು , ಜಿಲ್ಲಾ ಕಾಂಗ್ರೆಸ್ಉಪಾಧ್ಯಕ್ಷರೂ , ಬ್ಲಾಕ್ ಉಸ್ತುವಾರಿಗಳಾದ ಪ್ರಖ್ಯಾತ ಶೆಟ್ಟಿ , ಪಕ್ಷದ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್ ಹಾಗೂ ಹಾರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿಯವರು ಅಗಲಿದ ನಾಯಕರಿಗೆ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸತೀಶ್ ಕಲ್ಯಾಣಪುರ , ತಾರಾನಾಥ ಪೂಜಾರಿ , ಪ್ರಶಾಂತ್ ಸುವರ್ಣ , ಸೂರ್ಯ ಸಾಲಿಯಾನ್ , ಅಲ್ತಾಫ್ ಅಹಮ್ಮದ್, ಉಮೇಶ ಪೂಜಾರಿ, ಉದಯ ಆಚಾರ್ಯ, ಸಕೀರ್ ಎಮ್ ಹಾವಂಜೆ , ಗಾಯತ್ರಿ, ಶಶಿಕಲ , ನಿವಾಸ್ ಗುಲ್ವಾಡಿ, ವಸಂತ ಪೂಜಾರಿ , ಶರತ್ ಕುಂದರ್ ಹರಿಶ್ಚಂದ್ರ ಪೂಜಾರಿ . ಶೇಷ ನಾಯಕ್, ನಾಗರಾಜ್ ಪೂಜಾರಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Spread the love