ಬ್ರಹ್ಮಾವರ: ಮನೆಗೆ ನುಗ್ಗಿ 3.18 ಲಕ್ಷ ರೂ.ವೌಲ್ಯದ ನಗ-ನಗದು ಕಳವು

Spread the love

ಬ್ರಹ್ಮಾವರ, ಮೇ 13: ಮನೆಗೆ ನುಗ್ಗಿದ ಕಳ್ಳರು ರೂಮಿನಲ್ಲಿದ್ದ ಸುಮಾರು 3.18 ಲಕ್ಷ ರೂ.ವೌಲ್ಯದ ಚಿನ್ನಾಭರಣ, ನಗದು ಹಾಗೂ ಇತರ ಸೊತ್ತುಗಳನ್ನು ಕಳವು ಮಾಡಿದ ಘಟನೆ ಹೇರೂರು ಗ್ರಾಮದ ಹೇರಿಂಜೆ ದೇವಸ್ಥಾನ ರಸ್ತೆಯಲ್ಲಿರುವ ಸುರೇಶ್ ತೋನ್ಸೆ ಎಂಬವರ ಮನೆಯಲ್ಲಿ ನಡೆದಿದೆ.
ಮಾ.11ರ ಅಪರಾಹ್ನ 3ರಿಂದ ಮಾ.13ರ ನಡುವಿನ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಅಡುಗೆ ಕೋಣೆಯ ಬೀಗವನ್ನು ಮುರಿದು ಒಳಪ್ರವೇಶಿಸಿದ ಕಳ್ಳರು ಬೆಡ್‌ರೂಮಿನಲಿದ್ದ 2.44 ಲಕ್ಷ ರೂ. ವೌಲ್ಯದ ಚಿನ್ನಾಭರಣ, 36 ಸಾವಿರ ರೂ. ವೌಲ್ಯದ 100ಡಾಲರ್‌ನ 6 ನೋಟುಗಳು, 20 ಸಾವಿರ ರೂ. ನಗದು, 15 ಸಾವಿರ ರೂ. ವೌಲ್ಯದ ಸ್ಯಾಮ್‌ಸಂಗ್ ಕೆಮರಾ, ಟೈಟಾನ್ ವಾಚ್ ಸೇರಿದಂತೆ ಒಟ್ಟು 3.18 ಲಕ್ಷ ರೂ.ವೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ಸುರೇಶ್ ತೋನ್ಸೆ ಅವರು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.


Spread the love