ಬ್ರಹ್ಮಾವರ: ವೈದ್ಯಕೀಯ ಕ್ಷೇತ್ರ ಮಾನವಿಯತೆ ಮರೆಯುತ್ತಿದೆ ; ವಂ ವಾಲ್ಟರ್ ಮೆಂಡೋನ್ಸಾ

ಬ್ರಹ್ಮಾವರ: ಇಂದು ಸಾಮಾನ್ಯರು ಉತ್ತಮ ಚಿಕಿತ್ಸೆ ಪಡೆಯಲು ಅತ್ಯಧಿಕ ಹಣವನ್ನು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರಗಳು ನೀಡುತ್ತಿರುವ ವೈದ್ಯಕೀಯ ಯೋಜನೆಗಳ ಮಾಹಿತಿಯ ಕೊರತೆಯಿಂದ ಸೂಕ್ತ ಫಲಾನುಭವಿಗಳಿಗೆ ಸಿಗುತ್ತಿಲ್ಲ. ನಮ್ಮ ವೈದ್ಯಕೀಯ ಕ್ಷೇತ್ರ ಮಾನವಿಯತೆ ಮರೆತು ಹಣ ಮಾಡುವತ್ತಾ ಸಾಗುತ್ತಿರುವುದು ಬೇಸರದ ಸಂಗತಿ ಎಂದು ಸಂತ ಅಂತೋನಿ ಚರ್ಚಿನ ಧರ್ಮಗುರುಗಳಾದ ವಾಲ್ಟರ್ ಮೆಡೋನ್ಸಾ ಹೇಳಿದರು.

health-checkup-camp29032016

ಅವರು ಮಂಗಳವಾರದಂದು ಪಾಂಡೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಸಹಕಾರದಲ್ಲಿ ವಿಆರ್ ಫ್ರೆಂಡ್ಸ್ ಪಾಂಡೇಶ್ವರ, ಕೇಸರಿ ಯುವಜನ ಸಂಘ (ರಿ.) ಮೂಡಹಡು ಯಡಬೆಟ್ಟು, ಬಿಲ್ಲವ ಯುವ ವೇದಿಕೆ(ರಿ.) ಪಾಂಡೇಶ್ವರ ಮೂಡಕಡು ಮತ್ತು ಪಾಂಡೇಶ್ವರ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಆಯೋಜಿಸಲಾದ ಅಘಾತಕಾರಿ ಕಾಯಿಲೆಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು, ಇಂದು ನಾಲ್ಕು ಕಡೆಯಲ್ಲಿ ಜನಸ್ತೋಮ ಆಗುತ್ತಿರುವುದನ್ನು ಕಾಣಬಹುದು. ಒಂದನೇಯದಾಗಿ ದೇವಸ್ಥಾನ ಚರ್ಚ್ ಮಸೀದಿಗಳಲ್ಲಿ, ಎರಡನೇಯದಾಗಿ ಪೊಲೀಸ್ ಕೋರ್ಟ್, ಮೂರನೇಯದಾಗಿ ಬಾರ್ ಮತ್ತು 4ನೇಯದಾಗಿ ಆಸ್ಪತ್ರೆ ಡ್ರಗ್ ಹೌಸ್‍ನಲ್ಲಿ ಅತ್ಯಧಿಕ ಜನಸ್ತೋಮ ಕಾಣಬಹುದು ಎಂದರು.
ಪಾಂಡೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್, ತಾಲೂಕು ಪಂಚಾಯಿತಿ ಸದಸ್ಯೆ ಜ್ಯೋತಿ ಉದಯಕುಮಾರ್ ಶೆಟ್ಟಿ, ಬಿಲ್ಲವ ಯುವ ವೇದಿಕೆಯ ಮಂಜುನಾಥ್, ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಡಾ.ವಿಮಲಾದಿತ್ಯ, ಕೇಸರಿ ಯುವ ಜನ ಸಂಘದ ರಘು ಪೂಜಾರಿ ಉಪಸ್ಥಿತರಿದ್ದರು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಸಚ್ಚಿದಾನಂದ ಪ್ರಸ್ತಾವಿಸಿದರು. ಚಂದ್ರ ಮೋಹನ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಆರ್ ಫೆಂಡ್ಸ್ ಅಧ್ಯಕ್ಷ ಆಲ್ವಿನ್ ಅಂದಾದ್ರೆ ವಂದಿಸಿದರು. ಶಿಬಿರದಲ್ಲಿ ಹೃದಯರೋಗ, ಮೂತ್ರಪಿಂಡದ ತೊಂದರೆ, ನರರೋಗ, ಅಪಘಾತ, ಸುಟ್ಟಗಾಯ ಮತ್ತು ಚಿಕ್ಕಮಕ್ಕಳ ಕಾಯಿಲೆಗಳ ಸಂಬಂಧಿಸಿದ ತಪಾಸಣೆ ಮತ್ತು ಉಚಿತ ಚಿಕಿತ್ಸಾ ಸೌಲಭ್ಯ ನೀಡಲಾಯಿತು. ಸುಮಾರು 110 ಶಿಬಿರದ ಪ್ರಯೋಜನ ಪಡೆದರು.