‘ಬ್ರಾಹ್ಮಣ ಅಭಿವೃದ್ಧಿ ಮಂಡಳಿ’ಗೆ ಗೌಡ ಸಾರಸ್ವತ ಸಮಾಜದ ಪ್ರಾತಿನಿಧ್ಯ ಸೂಕ್ತ: ಮೇಯರ್ ಕೆ. ಭಾಸ್ಕರ 

Spread the love

‘ಬ್ರಾಹ್ಮಣ ಅಭಿವೃದ್ಧಿ ಮಂಡಳಿ’ಗೆ ಗೌಡ ಸಾರಸ್ವತ ಸಮಾಜದ ಪ್ರಾತಿನಿಧ್ಯ ಸೂಕ್ತ: ಮೇಯರ್ ಕೆ. ಭಾಸ್ಕರ 

ಮಂಗಳೂರು: ಮಂಗಳೂರಿನ ಆರ್ಥಿಕ, ಶೈಕ್ಷಣಿಕ ಹಾಗೂ ಸಮಾಜ ಸುಧಾರಣೆಗೆ ಗೌಡ ಸಾರಸ್ವತ ಸಮಾಜದ ಕೊಡುಗೆ ಅಪಾರವಾಗಿದೆ. ಕರಾವಳಿ ಕರ್ನಾಟಕದಲ್ಲಿ ನೆಲೆನಿಂತು 450 ವರ್ಷಗಳಲ್ಲಿ ಈ ಸಮಾಜದ ಜನರ ಸೌಮ್ಯ ಹಾಗೂ ವಾತ್ಸಲ್ಯಯುಕ್ತ ಜೀವನ ಎಲ್ಲ ಧರ್ಮದ, ಜಾತಿ ಮತದ ಜನರೊಡನೆ ಕೂಡಿ ಬಾಳಿ ತುಳುನಾಡ ಜನರ ಗೌರವಕ್ಕೆ ಪಾತ್ರರಾಗಿದ್ದರೆ, ಮಾನ್ಯ ಮುಖ್ಯಮಂತ್ರಿ ಶ್ರೀ ಎಚ್. ಡಿ. ಕುಮಾರಸ್ವಾಮಿಯವರು ಬಡ್ಜೆಟ್ಟಿನಲ್ಲಿ ಘೋಷಿಸಿದ ‘ಬ್ರಾಹ್ಮಣ ಅಭಿವೃದ್ದಿ ಮಂಡಳಿ’ಯಲ್ಲಿ ಈ ಸಮಾಜದ ಪ್ರತಿನಿಧಿಗೆ ತಾನು ಶಿಫಾರಸು ಮಾಡುತ್ತೇನೆ ಎಂದು ಗೌಡ ಸಾರಸ್ವತ ಬ್ರಾಹ್ಮಣ ಸೇವಾಸಂಘದ 80ನೇಯ ವಾರ್ಷಿಕೋತ್ಸವದ ವಿಶೇಷ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಮೇಯರ್ ಶ್ರೀ ಕೆ. ಭಾಸ್ಕರರವರು ಹೇಳಿದರು.

ಗೌಡ ಸಾರಸ್ವತ ಸಮಾಜದ ಏಳಿಗೆಗೆ ಸಹಾಯ ಹಸ್ತ ಚಾಚಿದ ಮಂಗಳೂರಿನ ಸಮಸ್ತ ಜನತೆಗೆ ತಾನು ಸಮಾಜದ ಸುಮಾರು 40000 ಜನರ ಪರವಾಗಿ ಕೃತಜ್ಞೆತೆ ಅರ್ಪಿಸುತಿದ್ದೇನೆ ಎಂದು ಸಂಘದ ಅಧ್ಯಕ್ಷ ಪ್ರೋ. ಡಾ. ಕಸ್ತೂರಿ ಮೋಹನ ಪೈಯವರು ತಮ್ಮ ಸ್ವಾಗತ ಭಾಷಣದಲ್ಲಿ ಹೇಳಿ ಮಾನ್ಯ ಮುಖ್ಯ ಮಂತ್ರಿಯವರಿಗೆ ಕೊಟ್ಟ ಮನವಿಯನ್ನು ಮೇಯರರವರಿಗೆ ಹಸ್ತಾಂತರಿಸಿದರು.

ಸಮಾಜದ ಹಿರಿಯರುಗಳಾದ ಜಿ. ವಿಶ್ವನಾಥ ಭಟ್ಟ. ಶ್ರೀ ವೆಂಕಟೇಶ ಬಾಳಿಗಾ, ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷರಾದ ಶ್ರೀ ಬಸ್ತಿ ವಾಮನ ಶೆಣೈಯವರು, ಪಂಡಿತ್ ಎಮ್. ಸುರೇಂದ್ರ ಆಚಾರ್ಯ, ಅರವಿಂದ ಆಚಾರ್ಯ, ಮಾಧವರಾಯ ಪ್ರಭು, ಎಮ್. ವಿಠಲ ಕುಡ್ವ, ಬಿ.ಆರ್. ಶೆಣೈ, ಸುರೇಶ ಶೆಣೈ, ಡಾ. ಎ. ರಮೇಶ ಪೈ, ಉಷಾ ಮೋಹನ ಪೈ, ಗೀತಾ ಕಿಣಿ, ಮಾಲತಿ ಯು ಕಾಮತ್ ಮುಂತಾದವರು  ಉಪಸ್ಥಿತರಿದ್ದರು.


Spread the love