ಬ್ರಾಹ್ಮಣ ಮಹಾಸಭಾ ಕೊಡವೂರು ವತಿಯಿಂದ ಆಟಿ ಕಷಾಯ ವಿತರಣೆ

Spread the love

ಬ್ರಾಹ್ಮಣ ಮಹಾಸಭಾ ಕೊಡವೂರು ವತಿಯಿಂದ ಆಟಿ ಕಷಾಯ ವಿತರಣೆ

ಉಡುಪಿ: ಆಟಿ ಅಮವಾಸ್ಯೆಯ ಪ್ರಯುಕ್ತ ಬ್ರಾಹ್ಮಣ ಮಹಾಸಭಾ ಕೊಡವೂರು ವತಿಯಿಂದ ವಿಪ್ರಶ್ರೀ ಕಲಾಭವನ ಕೊಡವೂರು ಇಲ್ಲಿ ಶನಿವಾರದಂದು ಉಚಿತವಾಗಿ ಸಾರ್ವಜನಿಕರಿಗೆ ಹಾಲೆ ಮರದ ತೊಗಟೆಯ ಕಷಾಯ ನೀಡುವ ಕಾರ್ಯಕ್ರಮ ನಡೆಯಿತು.

ಸುಮಾರು 700 ಕ್ಕೂ ಅಧಿಕ ಜನರು ಕಷಾಯದ ಪ್ರಯೋಜನ ಪಡೆದುಕೊಂಡರು. ನಿಗದಿತ ಸಮಯದಲ್ಲಿ ಸಾರ್ವಜನಿಕರು ಸ್ವಪ್ರೇರಣೆಯಿಂದ ಕಷಾಯ ಸ್ವೀಕರಿಸಿದರು.

ಹಲವರು ತಮ್ಮ ಮನೆಯವರಿಗೆ ಬಾಟಲುಗಳಲ್ಲಿ ಕಷಾಯ ತುಂಬಿಕೊಂಡು ಹೋಗುತ್ತಿದ್ದರು. ಹಲವಾರು ವರ್ಷಗಳಿಂದ ಈ ರೀತಿಯ ಮದ್ದು ಸಿಗದ ಜನರು ಕೂಡಾ ಆಸಕ್ತಿಯಿಂದ ಕಷಾಯ ಸೇವನೆ ಮಾಡಿ ಸಂತೃಪ್ತಿ ಹೊಂದಿದರು.


Spread the love