ಭಜರಂಗದಳದ ಕಾರ್ಯಕರ್ತನನ್ನು ವರಿಸಿದ ಮುಸ್ಲಿಂ ಯುವತಿ!

Spread the love

ಭಜರಂಗದಳದ ಕಾರ್ಯಕರ್ತನನ್ನು ವರಿಸಿದ ಮುಸ್ಲಿಂ ಯುವತಿ!

ಮಂಗಳೂರು: ಲವ್ ಜಿಹಾದ್ ವಿರುದ್ದ ಧ್ವನಿಯೆತ್ತುವ ಭಜರಂಗದಳದಲ್ಲೇ ಅಂತರ್ಧರ್ಮೀಯ ವಿವಾಹ ಜರುಗಿದ್ದು ಮುಸ್ಲಿಂ ಯುವತಿಯೋರ್ವಳು ಭಜರಂಗದಳದ ಕಾರ್ಯಕರ್ತನನ್ನೇ ವರಿಸಿದ ಘಟನೆ ಮಂಗಳೂರಿನ ಸುರತ್ಕಲ್ ಸಮೀಪ ಸಂಭವಿಸಿದೆ.

ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪ್ರಶಾಂತ್ ಭಂಡಾರಿ ಎಂಬ ಯುವಕ ಮುಸ್ಲಿಂ ಯುವತಿಯ ಜೊತೆ ವಿವಾಹವಾಗಿದ್ದಾನೆ.

ನವೆಂಬರ್ 30 ರಂದೇ ಸುರತ್ಕಲ್ ನಿವಾಸಿ ಆಯೇಷಾ ಎಂಬ ಯುವತಿಯ ಜೊತೆ ಪ್ರಶಾಂತ್ ತೆರಳಿದ್ದ ಎಂದು ತಿಳಿದುಬಂದಿದೆ. ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸಿದ ಬಳಿಕ ಜೋಡಿ ಈಗ ವಿವಾಹವಾಗಿದ್ದಾರೆ.

ಪ್ರಶಾಂತ್, ಸುರತ್ಕಲ್ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದು, ದೀಪಕ್ ರಾವ್ ಹತ್ಯೆ ಆರೋಪಿ ಪಿಂಕಿ ನವಾಜ್ ಎಂಬಾತನ ಹತ್ಯೆಗೂ ಪ್ರಶಾಂತ್ ಭಂಡಾರಿ ಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಕಾಲಾಂತರದಲ್ಲಿ ಸುರತ್ಕಲ್ ಮುಸ್ಲಿಂ ಯುವತಿಯನ್ನು ಪ್ರೀತಿಸಿ ವರಿಸಿದ್ದಾನೆ ಪ್ರಶಾಂತ್.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಆಯೇಷಾ ಪೋಷಕರು ಸದ್ಯ ಸುರತ್ಕಲ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.


Spread the love