ಭಯೋತ್ಪಾದಕರ ಕೃತ್ಯ ಖಂಡಿಸಿ, ಶ್ರೀಲಂಕಾದ ನೊಂದ ಕುಟುಂಬಸ್ಥರೊಂದಿಗೆ ನಿಂತ ವಿದ್ಯಾರ್ಥಿಗಳು!

ಭಯೋತ್ಪಾದಕರ ಕೃತ್ಯ ಖಂಡಿಸಿ, ಶ್ರೀಲಂಕಾದ ನೊಂದ ಕುಟುಂಬಸ್ಥರೊಂದಿಗೆ ನಿಂತ ವಿದ್ಯಾರ್ಥಿಗಳು!

ಉಡುಪಿ: ಶ್ರೀಲಂಕಾದಲ್ಲಿ ಭಯೋತ್ಪಾದಕರು ಚರ್ಚಿನಲ್ಲಿ ನಡೆಸಿದ ಬಾಂಬ್ ದಾಳಿ ಖಂಡಿಸಿ ಮತ್ತು ದುರ್ಘಟನೆಯಲ್ಲಿ ಮಡಿದ ಕುಟುಂಬಕ್ಕೆ ಸಾಂತ್ವನ ನೀಡಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ, ಕರ್ನಾಟಕ ಹಮ್ಮಿಕೊಂಡ ಕಾರ್ಯಕರ್ತರ ವಲಯ ಮಟ್ಟದ ಸಮಾವೇಶದಲ್ಲಿ #INSOLIDARITYWITHSRILANKA ಎಂಬ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು.

ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದವರ ಕುಟುಂಬಗಳಿಗೆ ನೋವನ್ನು ಸಹಿಸುವ ಶಕ್ತಿಯನ್ನು ದೇವರು ದಯಪಾಲಿಸಲೆಂದು ಸಮಾವೇಶದಲ್ಲಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಐ.ಓ ರಾಷ್ಟ್ರೀಯ ಅಧ್ಯಕ್ಷರಾದ ಲಬೀದ್ ಶಾಫಿ, ಎಸ್.ಐ.ಓ ರಾಜ್ಯಧ್ಯಕ್ಷರಾದ ನಿಹಾಲ್ ಕಿದಿಯೂರು, ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಝೀಶಾನ್ ಅಖಿಲ್, ಅಸೀಮ್ ಜವಾದ್, ಶಬ್ಬೀರ್ ಮಲ್ಪೆ, ಅಬ್ದುಲ್ ಕಾದೀರ್ ಹೂಡೆ, ರಫೀಕ್ ಮಲ್ಪೆ, ಅನ್ವರ್ ಅಲಿ ಕಾಪು, ರಿಝ್ವಾನ್ ಮಂಗಳೂರು ಮುಂತಾದವರು ಉಪಸ್ಥಿತರಿದ್ದರು.