ಭಾರತೀಯ ಹಿಂದೂ ಅಧಿವೇಶನ ಪ್ರಾರಂಭ!

Spread the love

ರಾಮನಾಥಿ (ಗೋವಾ): ಹಿಂದೂ ರಾಷ್ಟ್ರದ (ಸನಾತನ ಧರ್ಮ ರಾಜ್ಯದ) ಸ್ಥಾಪನೆಗಾಗಿ ಇಂದು, ಜೂನ್ ೧೯ ರಂದು ಮುಂಜಾನೆ ಸಂತರ ಉಪಸ್ಥಿತಿ ಮತ್ತು ವೇದಮಂತ್ರಗಳ ಘೋಷಣೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಸನಾತನದ ಸಂತರಾದ ಪೂ.(ಕು.) ಅನುರಾಧಾ ವಾಡೇಕರ; ವೈದಿಕ ಉಪಾಸನಾ ಪೀಠದ ಪೂ. ತನುಜಾ ಠಾಕೂರ; ಗುಜರಾತಿನ ಪೂ. ಸ್ವಾಮಿ ದಿವ್ಯಜೀವನದಾಸ ಮಹಾರಾಜರು ಮತ್ತು ತುಳಜಾಪೂರ, ಮಹಾರಾಷ್ಟ್ರದ ಪಂಚದಶನಾಮ ಜುನಾ ಆಖಾಡಾದು ಮಹಂತರಾದ ಇಚ್ಛಾಗಿರಿ ಮಹಾರಾಜರು ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಪೂ. ಡಾ. ಚಾರುದತ್ತ ಪಿಂಗಳೆ ಇವರ ಹಸ್ತದಿಂದ ದೀಪಪ್ರಜ್ವಲನಗೊಳಿಸಲಾಯಿತು. ಈ ಅಧಿವೇಶನದಲ್ಲಿ ಭಾರತಾದ್ಯಂತ ೨೨ ರಾಜ್ಯಗಳ ಸಹಿತ ನೇಪಾಳ, ಶ್ರೀಲಂಕಾದ ೧೬೧ ಕ್ಕಿಂತ ಅಧಿಕ ಹಿಂದುತ್ವನಿಷ್ಠ ಸಂಘಟನೆಗಳ ೪೦೦ ಕ್ಕಿಂತ ಅಧಿಕ ಪ್ರತಿನಿಧಿಗಳು ಉಪಸ್ಥಿತರಿದ್ದಾರೆ. ಈ ಸಂದರ್ಭದಲ್ಲಿ ಸಂತರು ಮತ್ತು ಮಹನೀಯರು ಹಿಂದೂಗಳಿಗೆ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಟಿಬದ್ಧರಾಗುವಂತೆ ಕರೆ ನೀಡಿದರು.

ABHA_D19_Ph1

ಹಿಂದೂ ಜನಜಾಗೃತಿ ಸಮಿತಿಯು ಜಗತ್ತಿನಲ್ಲಿ ಉತ್ಕೃಷ್ಟ ಕಾರ್ಯವನ್ನು ಮಾಡುತ್ತಿದೆ ! – ಮಹಂತ ಇಚ್ಛಾಗಿರಿ ಮಹಾರಾಜರು
ಹಿಂದೂ ಅಧಿವೇಶನವನ್ನು ಆಯೋಜಿಸಿರುವ ಹಿಂದೂ ಜನಜಾಗೃತಿ ಸಮಿತಿಯು ಜಗತ್ತಿನಲ್ಲಿ ಉತ್ಕೃಷ್ಟ ಕಾರ್ಯವನ್ನು ಕೈಕೊಳ್ಳುತ್ತಿದೆ. ಸನಾತನ ಸಂಸ್ಥೆಯ ರಾಮನಾಥಿಯಲ್ಲಿರುವ ಆಶ್ರಮವನ್ನು ನೋಡಿ ಭಾವಿ ಹಿಂದೂ ರಾಷ್ಟ್ರ ಹೇಗಿರಬಹುದು ಎನ್ನುವ ಕಲ್ಪನೆ ಬರುತ್ತದೆ, ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಹಿಂದೂಗಳು ಹಿಂದೂ ರಾಷ್ಟ್ರಕ್ಕಾಗಿ ಹೆಜ್ಜೆಯನ್ನಿಡಬೇಕು ! – ಸ್ವಾಮಿ ದಿವ್ಯ ಜೀವನದಾಸ ಮಹಾರಾಜ

ಹಿಂದೂಗಳು ಹಿಂದೂ ರಾಷ್ಟ್ರ ಸಮೀಪಿಸುವಂತಹ ಹೆಜ್ಜೆಯನ್ನಿಡಬೇಕು, ಎಂದು ಪೂ. ಸ್ವಾಮಿ ದಿವ್ಯ ಜೀವನದಾಸ ಮಹಾರಾಜರು ಪ್ರತಿಪಾದಿಸಿದರು. ಅವರು ಹಿಂದೂಗಳು ಮಾಡುತ್ತಿರುವ ಪಾಶ್ಚಾತ್ಯರ ಅಂಧಾನುಕರಣೆಯನ್ನು ಟೀಕಿಸಿದರು.

ದೇಶದಲ್ಲಿ ಹಿಂದೂಗಳು ಉಳಿದರೆ ಮಾತ್ರ ರಾಷ್ಟ್ರ ಉಳಿಯುವುದು ! – ಶ್ರೀ. ಹರಿಶಂಕರ ಜೈನ್, ಹಿರಿಯ ಹಿಂದುತ್ವನಿಷ್ಠ ನ್ಯಾಯವಾದಿ
ಇಂದು ಹಿಂದೂಗಳ ಶ್ರದ್ಧಾಸ್ಥಾನಗಳ ವಿಷಯದ ಅರ್ಜಿ ಬಗ್ಗೆ ಹಿಂದೂವಿರೋಧಿ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ; ಏಕೆಂದರೆ ನ್ಯಾಯ ನೀಡುವವರು ಜಾತ್ಯತೀತ ಶಿಕ್ಷಣ ವ್ಯವಸ್ಥೆಯಿಂದ ಬಂದಿರುತ್ತಾರೆ. ಅವರಿಗೆ ಆ ರೀತಿಯ ಸಂಸ್ಕಾರವಾಗಿರುತ್ತದೆ. ಈ ದೇಶದಲ್ಲಿ ಹಿಂದೂಗಳು ಉಳಿದರೆ ಮಾತ್ರ ದೇಶವು ಉಳಿಯುವುದು ಇಲ್ಲದಿದ್ದರೆ ಇಸ್ಲಾಮಿಕ್ ಸ್ಟೇಟ್‌ನಂತಹವರು ಅದನ್ನು ನಾಶ ಮಾಡುವರು.

ಹಿಂದುತ್ವನಿಷ್ಠರ ಸಂಘಟನೆಯೇ ಹಿಂದೂ ರಾಷ್ಟ್ರ ಸ್ಥಾಪಿಸುವುದು ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಹಿಂದೂ ರಾಷ್ಟ್ರ ಈ ಶಬ್ದವನ್ನು ಉಚ್ಚರಿಸಿದರೆ ಸಾಕು ಪುರೋಗಾಮಿಗಳು, ಜಾತ್ಯತೀತರು, ಇತರ ಪಂಥೀಯರು ಮತ್ತು ಪ್ರಸಾರಮಾಧ್ಯಮದವರು ಹಿಂದೂ ರಾಷ್ಟ್ರದ ಬೇಡಿಕೆಯು ಸಂವಿಧಾನಬಾಹಿರವಾಗಿದೆ, ಎಂದು ಕೋಲಾಹಲವೆಬ್ಬಿಸುತ್ತಾರೆ. ಸಂವಿಧಾನದ ಅರೆಬರೆ ಅಧ್ಯಯನ ಮಾಡುವವರು ಹಿಂದೂ ರಾಷ್ಟ್ರದ ಬೇಡಿಕೆಯು ಸಂವಿಧಾನಕ್ಕನುಸಾರವಾಗಿದೆ, ಎಂಬುದನ್ನು ಗಮನದಲ್ಲಿಡಬೇಕು.


Spread the love