ಭಾರತ್ ಬಂದ್‍  ಯಶಸ್ವಿಗೊಳಿಸಲು ಮೀನುಗಾರ ಕಾಂಗ್ರೆಸ್ ಕರೆ

Spread the love

ಭಾರತ್ ಬಂದ್‍  ಯಶಸ್ವಿಗೊಳಿಸಲು ಮೀನುಗಾರ ಕಾಂಗ್ರೆಸ್ ಕರೆ

ಉಡುಪಿ: ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಗಮನಾರ್ಹ ರೀತಿಯಲ್ಲಿ ಕಡಿಮೆಯಾದರೂ ಭಾರತ ಸರ್ಕಾರ ಪೆಟ್ರೋಲ್ ಬೆಲೆಯನ್ನು ಅವೈಜ್ಞಾನಿಕವಾಗಿ ನಿರಂತರ ಏರಿಸಿರುವುದನ್ನು ವಿರೋಧಿಸಿ ಅಖಿಲ ಭಾರತ ಕಾಂಗ್ರೆಸ್ ಪಕ್ಷ ಸೋಮವಾರ “ಭಾರತ ಬಂದ್”ಗೆ ಕರೆ ನೀಡಿರುವುದರಿಂದ ಸೋಮವಾರ ನಡೆಯಲಿರುವ ಬಂದ್ ಯಶಸ್ವಿಯಾಗಿ ಮಾಡಲು ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್ ಕರೆ ನೀಡಿದೆ. ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಮಾಜಿ ಶಾಸಕ ಯು. ಆರ್. ಸಭಾಪತಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಪೀರು ಎಮ್. ಸಾಹೇಬ್, ರಾಷ್ಟ್ರೀಯ ಕಾರ್ಯದರ್ಶಿ ಕಿರಣ್ ಕುಮಾರ್ ಉದ್ಯಾವರ, ಜಿಲ್ಲಾಧ್ಯಕ್ಷ ಮನೋಜ್ ಕರ್ಕೇರಾ, ಉಪಾಧ್ಯಕ್ಷ ರಮೇಶ್ ತಿಂಗಳಾಯ ಹೇಳಿಕೆಯಲ್ಲಿ ಜನತೆಗೆ ವಿನಂತಿ ಮಾಡಿದ್ದಾರೆ.


Spread the love