ಭಾರತ್ ಬಂದ್ ಬೆಂಬಲಿಸುವಂತೆ ಕೋರಿ ನಗರದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪಾದಯಾತ್ರೆ

Spread the love

ಭಾರತ್ ಬಂದ್ ಬೆಂಬಲಿಸುವಂತೆ ಕೋರಿ ನಗರದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪಾದಯಾತ್ರೆ

ಉಡುಪಿ: ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್ಗೆ ಉಡುಪಿ ಜಿಲ್ಲೆಯಲ್ಲಿ ಕೂಡ ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ. ಹೀಗಾಗಿ ಸೆ. 10ರಂದು ಬಸ್, ಆಟೊ, ಟ್ಯಾಕ್ಸಿ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.

ಜಿಲ್ಲೆಯ ವಾಣಿಜ್ಯೋದ್ಯಮಿಗಳು ಬಂದ್ ಗೆ ಬೆಂಬಲ ನೀಡುವಂತೆ ಕೋರಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಭಾನುವಾರ ಪಾದಯಾತ್ರೆ ನಡೆಸಿ ಮನವಿ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಅವರು ಕೇಂದ್ರ ಸರಕಾರವು ಬೆಲೆ ಏರಿಕೆಯನ್ನು ತಡೆಯಲು ಸಂಪೂರ್ಣವಾಗಿ ವಿಫಲವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಆಹಾರ ಪದಾರ್ಥಗಳ ದರ ಜಾಸ್ತಿಯಾಗಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಅಚ್ಚೇ ದಿನ್ ಬರುತ್ತೆ ಅಂತ ಮೋದಿಯ ಮಾತಿಗೆ ಕಾದು ಕುಳೀತರೆ ಏನೂ ಉಪಯೋಗವಿಲ್ಲ. ಸೋಮವಾರ ಭಾರತ್ ಬಂದ್ ಗೆ ಕಾಂಗ್ರೆಸ್ ಕರೆ ಕೊಟ್ಟಿದೆ. ಇದನ್ನು ಎಲ್ಲರೂ ಒಕ್ಕೂರಲಿನಿಂದ ಖಂಡಿಸಬೇಕು ಅಂತ ಬಂದ್ ಮಾಡುವಂತೆ ಜಿಲ್ಲಾ ಕಾಂಗ್ರೆಸ್ ಪರವಾಗಿ ಕರೆ ನೀಡಿದರು. ಸೋಮವಾರ ಭಾರತ್ ಬಂದ್ ಹಿನ್ನೆಲೆಯಲ್ಲಿ ನಾವು ಬಿಜೆಪಿಯವರಂತೆ ಬೆಂಕಿ ಹಾಕಿ ಪ್ರತಿಭಟನೆ ಮಾಡೋದಿಲ್ಲ. ಅಂಗಡಿಗಳ ಶಟರ್ ಎಳೆದು ಸಮಸ್ಯೆ ಕೊಡುವುದಿಲ್ಲ. ಜನತೆಯ ಮೇಲೆ ಯಾವುದೇ ಒತ್ತಡ ಹಾಕುವುದಿಲ್ಲ ಅಂತ ಹೇಳಿದರು. ಕಾಂಗ್ರೆಸ್ ಕರೆ ನೀಡಿದ ಭಾರತ್ ಬಂದ್ ಗೆ ಜಿಲ್ಲೆಯ ಮಟ್ಟಿಗೆ ಭಾರೀ ಬೆಂಬಲ ಸಿಕ್ಕಿದೆ ಎಂದರು.

ಪಾದಯಾತ್ರೆಯ ವೇಳೆ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹರೀಶ್ ಕಿಣಿ, ಕೆಪಿಸಿಸಿ ಸದಸ್ಯರಾದ ವೆರೋನಿಕಾ ಕರ್ನೆಲಿಯೊ, ದಿನೇಶ್ ಪುತ್ರನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಕಾಂಗ್ರೆಸ್ ನಾಯಕರಾದ ರಮೇಶ್ ಕಾಂಚನ್, ನರಸಿಂಹ ಮೂರ್ತಿ, ಜನಾರ್ದನ ಭಂಡಾರ್ಕರ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love