ಭಿನ್ನಕೋಮಿನ ಯುವತಿಯೊಂದಿಗೆ ತಿರುಗುತ್ತಿದ್ದ ಯುವಕನ್ನನ್ನು ಪೋಲಿಸರಿಗೆ ಒಪ್ಪಿಸಿದ ಹಿಂಜಾವೇ ಕಾರ್ಯಕರ್ತರು

Spread the love

ಭಿನ್ನಕೋಮಿನ ಯುವತಿಯೊಂದಿಗೆ ತಿರುಗುತ್ತಿದ್ದ ಯುವಕನ್ನನ್ನು ಪೋಲಿಸರಿಗೆ ಒಪ್ಪಿಸಿದ ಹಿಂಜಾವೇ ಕಾರ್ಯಕರ್ತರು

ಮಂಗಳೂರು: ಪರಸ್ಪರ ಭಿನ್ನಕೋಮಿನ ಯುವಕ ಯುವತಿ ಜೊತೆಯಾಗಿ ತಿರುಗಾಡುತ್ತಿದ್ದು, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಯುವಕನ್ನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ ಘಟನೆ ಬುಧವಾರ ನಗರದ ಸ್ಟೇಟ್ ಬ್ಯಾಂಕ್ ಬಳಿ ನಡೆದಿದೆ.

ಬುಧವಾರ ಭಿನ್ನಕೋಮಿನ ಯುವಕನೋರ್ವ ಇನ್ನೊಂದು ಕೋಮಿನ ಯುವತಿಯೊಂದಿಗೆ ಸ್ಟೇಟ್ ಬ್ಯಾಂಕ್ ಬಳಿ ಜೊತೆಯಾಗಿ ತಿರುಗಾಡುತ್ತಿದ್ದು, ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಮಾಹಿತಿ ಲಭಿಸಿದ್ದು ಕೂಡಲೇ ಸ್ಥಳಕ್ಕೆ ಹೋಗಿದ್ದು, ಕಾರ್ಯಕರ್ತರನ್ನು ಕಂಡು ಯುವತಿ ಸ್ಥಳದಿಂದ ಕಾಲ್ಕಿತ್ತಿದ್ದು, ಯುವಕನನ್ನು ಕಾರ್ಯಕರ್ತರು ಹಿಡಿದು ವಿಚಾರಿಸಿದ ವೇಳೆ ಯುವತಿಯು ಸ್ಥಳೀಯ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಉಪಹಾರ ಸೇವಿಸುವುದಕ್ಕಾಗಿ ಸ್ಟೇಟ್ ಬ್ಯಾಂಕಿಗೆ ಬಂದಿರುವುದಾಗಿ ಯುವಕ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಈ ವೇಳೆ ಹಿಂಜಾವೇ ಕಾರ್ಯಕರ್ತರು ಯುವಕನಿಗೆ ಎಚ್ಚರಿಕೆ ನೀಡಿದ್ದು ಬೇರೆ ಕೋಮಿನ ಯುವತಿಯರೊಂದಿಗೆ ತಿರುಗಾಡದಂತೆ ಎಚ್ಚರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಯುವಕನ್ನನ್ನು ಪಾಂಡೇಶ್ವರ ಪೋಲಿಸರಿಗೆ ಹಸ್ತಾಂತರಿಸಿದ್ದಾರೆ.

ಪಾಂಡೇಶ್ವರ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.


Spread the love

1 Comment

Comments are closed.