ಭೀಕರ ಅಫಘಾತಕ್ಕೆ 8 ಶಾಲಾ ಮಕ್ಕಳು ಬಲಿ

Spread the love

ಭೀಕರ ಅಫಘಾತಕ್ಕೆ 8 ಶಾಲಾ ಮಕ್ಕಳು ಬಲಿ

ಕುಂದಾಪುರ: ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಒಮಿನಿ ಕಾರೊಂದು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಶಾಲಾ ಮಕ್ಕಳು ಸಾವನಪ್ಪಿದ ಭೀಕರ ಅಫಘಾತದ ಘಟನೆ ಕುಂದಾಪುರ ತಾಲೂಕಿನ ತ್ರಾಸಿ ಮೊವಾಡಿಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

image001accident-movadi-trasi-20160621 image002accident-movadi-trasi-20160621 image003accident-movadi-trasi-20160621 image004accident-movadi-trasi-20160621 image008accident-movadi-trasi-20160621 image009accident-movadi-trasi-20160621 image010accident-movadi-trasi-20160621 image011accident-movadi-trasi-20160621 image012accident-movadi-trasi-20160621 image013accident-movadi-trasi-20160621 image014accident-movadi-trasi-20160621 image015accident-movadi-trasi-20160621

ಬೈಂದೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸು ಹೆಮ್ಮಾಡಿಯಿಂದ ತ್ರಾಸಿ ಡೊನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಾರುತಿ ಒಮಿನಿ ಪರಸ್ಪರ ಡಿಕ್ಕಿ ಹೊಡೆದು ಅಫಘಾತ ಸಂಭವಿಸಿದೆ. ಒಮಿನಿ ಚಾಲಕ ತಿರುವಿನಿಲ್ಲಿ ಯಾವುದೇ ರೀತಿಯ ಸಿಗ್ನಲ್ ನೀಡದೆ ಕಾರನ್ನು ಬಲಕ್ಕೆ ತಿರುಗಿಸಿದ ಪರಿಣಾಮ ಎದುರಿನಿಂದ ಬರುತ್ತಿದ್ದ ಬಸ್ಸು ಡಿಕ್ಕಿ ಹೊಡೆದಿದೆ. ದುರಂತದಲ್ಲಿ ಕೆಲವು ಮಕ್ಕಳು ಸ್ಥಳದಲ್ಲಿಯೇ ಸಾವನಪ್ಪಿದ್ದರೆ, ಇನ್ನು ಕೆಲವರು ದಾರಿ ಮಧ್ಯೆ ಹಾಗೂ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.

ಮೃತಪಟ್ಟವನ್ನು ಅನನ್ಯ, ಅನ್ಸಿಟಾ, ಕೆಲಿಸ್ಟಾ, ರೋಯ್ ಸ್ಟನ್, ಡೆಲ್ಸಿನ್, ನಿಕಿತಾ, ಕ್ಲರಿಶಾ, ಅನ್ಸಿಟಾ ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ಹಾಗೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.


Spread the love