ಭೀಮಾ ಕೋರೆಗಾಂ ಘಟನೆ ಪ್ರತಿಭಟಿಸಿ ಮಹಾರಾಷ್ಟ್ರ ಬಂದ್

Spread the love

ಭೀಮಾ ಕೋರೆಗಾಂ ಘಟನೆ ಪ್ರತಿಭಟಿಸಿ ಮಹಾರಾಷ್ಟ್ರ ಬಂದ್

  • ರಾಜ್ಯದದ್ಯಾಂತ ಅಸ್ತವ್ಯಸ್ತಗೊಂಡ ಜನಜೀವನ- ವಾಹನಗಳು ಬೆಂಕಿಗೆ ಆಹುತಿ

ಮುಂಬಯಿ: ಮಹಾರಾಷ್ಟ್ರ ರಾಜ್ಯದ ಪುಣೆಯ ಶಿರೂರ್ ತಾಲೂಕ್‍ನ ಕೋರೆಗಾಂನಲ್ಲಿ ಕಳೆದ ಸೋಮವಾರ ಭೀಮಾ ಕೋರೆಗಾಂ ಕದನ ಸಂಗ್ರಾಮದ ದ್ವಿಶತಮಾನ ವಿಜಯೋತ್ಸವ ದಿನಾಚರಣೆ ವೇಳೆ ನಡೆದ ಅಹಿತಕರ ಘಟನೆಗೆ ನ್ಯಾಯ ಆಗ್ರಹಿಸಿ ಭಾರಿಪ ಬಹುಜನ ಮಹಾ ಸಂಘ ಮತ್ತು ರಾಜ್ಯದ ಎಡ ಪಂಥಿüೀಯ ಸಂಘಟನೆಗಳು, ಮಹಾರಾಷ್ಟ್ರ ಡೆಮಾಕ್ರೆಟಿಕ್ ಫ್ರಂಟ್ ಸೇರಿದಂತೆ ರಾಜ್ಯದ ನೂರಾರು ಸಂಘಟನೆಗಳು ಇಂದು ಕರೆದಿದ್ದ ಮಹಾರಾಷ್ಟ್ರ ಬಂದ್ ಅವಾಂತರವನ್ನೇ ಸೃಷ್ಟಿಸಿತು.

ಭಾರಿಪ ಬಹುಜನ ಮಹಾ ಸಂಘದ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಮತ್ತಿತರರು ಕರೆದಿದ್ದ ಮಹಾರಾಷ್ಟ್ರ ಬಂದ್‍ನಿಂದ ಬೃಹನ್ಮುಂಬಯಿ ಹಾಗೂ ಉಪನಗರಗಳು ಸೇರಿದಂತೆ ರಾಜ್ಯದಾದ್ಯಂತ ಜನಜೀವನವೂ ಅಸ್ತವ್ಯಸ್ತ ಗೊಂಡಿದ್ದು ದೈನಂದಿನ ಚಟುವಟಿಕೆಗಳಲ್ಲಿ ಭಾರೀ ವ್ಯತ್ಯಾಯ ಕಂಡಿತು. ಉದ್ರಿಕ್ತರ ಆಕ್ರೋಶಕ್ಕೆ ನೂರಾರು ದ್ವಿಚಕ್ರ ಮತ್ತಿತರ ವಾಹನಗಳು, ಖಾಸಾಗಿ, ಸರಕಾರಿ ಬಸ್ಸುಗÀಳು ಬೆಂಕಿಗೆ ಆಹುತಿ ಆದರೆ ಸಾವಿರಾರು ವಾಹನಗಳು ಕಲ್ಲೆಸೆತಕ್ಕೆ ಹಾನಿಗೊಂಡವು. ಕಲ್ಯಾಣ್‍ನ ಶಿವಸೇನಾ ಕಛೇರಿ ದ್ವಂಸಗೊಂಡಿತು.

ಶಾಲಾ ಕಾಲೇಜುಗಳು ಮತ್ತು ಖಾಸಾಗಿ ಕಛೇರಿಗಳು ಮಧ್ಯಾಹ್ನದ ಪೂರ್ವಾಹ್ನ ಸಮಯಕ್ಕೆ ಬಾಗಿಲು ಮುಚ್ಚಿದ್ದು ವಿದ್ಯಾಥಿರ್üಗಳು, ಶಿಕ್ಷಕರು ಮತ್ತು ಕೆಲಸಕ್ಕೆ ತೆರಳಿದ್ದ ನಾಗರೀಕರು ರೈಲು ಯಾನ, ವಾಹನ ಸಂಚಾರ, ಮೆಟ್ರೋ ಸ್ತಬ್ಧಗೊಂಡ ಪರಿಣಾಮ ಜನರು ಪರದಾಡಿಯೇ ಮೈಲುಗಟ್ಟಲೆ ಸಾಗಿ ಮನೆ ಸೇರಿದರು. ಅಸ್ತವ್ಯಸ್ಥದ ಮೂಲಕ ಜನಜೀವನ ಸ್ತಬ್ಧಗೊಂಡಿತು.

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

Click Here for Photo Album


Spread the love