ಮಂಗಳಾದೇವಿ ದೇವಸ್ಥಾನ ಮರದ ಟೊಂಗೆ ಬಿದ್ದು ಗಾಯಗೊಂಡವರ ಆರೋಗ್ಯ ವಿಚಾರಿಸಿದ ಜೆ.ಆರ್.ಲೋಬೊ

Spread the love

ಮಂಗಳಾದೇವಿ ದೇವಸ್ಥಾನ ಮರದ ಟೊಂಗೆ ಬಿದ್ದು ಗಾಯಗೊಂಡವರ ಆರೋಗ್ಯ ವಿಚಾರಿಸಿದ ಜೆ.ಆರ್.ಲೋಬೊ

ಮಂಗಳೂರು: ಮಾಜಿ ಶಾಸಕರಾದ  ಜೆ.ಆರ್.ಲೋಬೊರವರು ನಿನ್ನೆ ರಾತ್ರಿ  ಮಂಗಳಾದೇವಿ ದೇವಸ್ಥಾನದಲ್ಲಿ  ಮರ ಬಿದ್ದು ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಿ ನಂತರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹೊಂದುತ್ತಿರುವ ಗಾಯಳುಗಳನ್ನು  ಭೇಟಿ ಮಾಡಿ  ಗಾಯ ಗೊಂಡವರ ಅರೋಗ್ಯ ವಿಚಾರಿಸಿದರು.

ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಗಾಳಿಗೆ ದೇವಸ್ಥಾನದ ಎದುರಿನ ಅಶೋಕ ಮರದ ರೆಂಬೆಯೊಂದು ತುಂಡಾಗಿ ಬಿದ್ದಿದ್ದು, ಈ ಸಂದರ್ಭ ಅಲ್ಲಿದ್ದ ನಾಲ್ಕು ಮಂದಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.


Spread the love