ಮಂಗಳೂರಿಗರಿಗೆ ರಂಗ ಮಂದಿರ ಇಲ್ಲದೇ ಬೀದಿಯಲ್ಲೇ ನಾಟಕ ಮಾಡಬೇಕಾದ ಪರಿಸ್ಥಿತಿ : ಐಕೆ ಬೊಳುವಾರು

Spread the love

ಮಂಗಳೂರಿಗರಿಗೆ ರಂಗ ಮಂದಿರ ಇಲ್ಲದೇ ಬೀದಿಯಲ್ಲೇ ನಾಟಕ ಮಾಡಬೇಕಾದ ಪರಿಸ್ಥಿತಿ : ಐಕೆ ಬೊಳುವಾರು

ಬುದ್ದಿವಂತರ ಜಿಲ್ಲೆಯವರೆಂದು ಕರೆಸಿಕೊಳ್ಳುವ ನಾವು ಸರಕಾರದಿಂದ ಈವರೆಗೆ ಒಂದು ವ್ಯವಸ್ಥಿತ ಜಿಲ್ಲಾ ರಂಗಮಂದಿರ ಪಡೆಯಲು ವಿಫಲರಾದ ಈ ಸಂದರ್ಭದಲ್ಲಿ ಬೀದಿಯಲ್ಲೇ ನಾಟಕ‌ಮಡುವುದು ಸೂಕ್ತ ಎಂದು ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಸಿಜಿಕೆ ರಂಗ ಪುರಸ್ಕಾರವನ್ನು ಸ್ವೀಕರಿಸಿ ಐಕೆ ಬೊಳುವಾರು ಮಂಗಳೂರಿನ ಪ್ರಸ್ತುತ ರಂಗಭೂಮಿಯ ಬಗ್ಗೆ ವಿಶ್ಲೇಷಿಸಿದರು. ರಾಜ್ಯಾದ್ಯಂತ ಪ್ರತೀ ಜಿಲ್ಲೆಯಲ್ಲಿ ನೀಡುವ ಈ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐಕೆ ಬೊಳುವಾರು ಆಯ್ಕೆಯಾಗಿದ್ದರು. ಪಾದುವ ಕಾಲೇಜಿನಲ್ಲಿ ಸಿಜಿಕೆ ಬೀದಿರಂಗ ದಿನವನ್ನು ಆಚರಿಸಿದ ಸಂದರ್ಭದಲ್ಲಿ ಈ ಪುರಸ್ಕಾರವನ್ನು ಪ್ರಧಾನ ಮಾಡಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ರಂಗಕರ್ಮಿ ಚಂದ್ರಹಾಸ್ ಉಳ್ಲಾಲ್ ಒಂದು ಕಾಲದಲ್ಲಿ ಜನಜೀವನದಲ್ಲಿ ಕಾಡುತ್ತಿದ್ದ ಅಸಮಾನತೆಯ, ಶೋಷಣೆಯ ವಿರುದ್ದ ಧ್ವನಿಯಾಗಿದ್ದ ಬೀದಿ ನಾಟಕಗಳು ಇಂದು ಸೊಳ್ಳೆ, ಮಲೇರಿಯಾ, ಮುಂತಾದ ವಿಷಯಗಳಿಗಷ್ಟೇ ಸೀಮಿತವಾಗಿಬಿಟ್ಟಿವೆ ಎಂದು ವಿಷಾದ ವ್ಯಕ್ತಪಡಿಸುವ ಜೊತೆ ಜೊತೆಗೆ ಮುಂದೆ ಸರಿಯಾಗಬಹುದೆಂಬ ಆಶಾಭಾವನೆಯನ್ನೂ ವ್ಯಕ್ತಪಡಿಸಿದರು. ಪ್ರಶಸ್ತಿ ಪ್ರಧಾನ ಮಾಡಿದ ಪಾದುವ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಫಾ. ವಿನ್ಸೆಂಟ್ ಮೊಂತೇರೊರವರು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲು ಬೀದಿನಾಟಕ ಉತ್ತಮ ಮಾದ್ಯಮ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷರಾಗಿ ಆಗಮಿಸಿದ ಡಾ. ನರಸಿಂಹಮೂರ್ತಿಯವರು ಸಿಜಿಕೆ ನಂಬಿದ್ದ ಧೋರಣೆಗಳನ್ನು, ಸಶಕ್ತವಾಗಿ ಅಳವಡಿಸಿಕೊಂಡು, ಆಡಂಭರದ ಶೋಕಿಗೆ ನಾಟಕ ಮಾಡದೇ, ಸರಳಾವಾದ ರೀತಿಯಲ್ಲೇ ರಂಗಕಾಯಕವನ್ನು ಮಾಡಿದ ಐಕೆ ಬೊಳುವಾರಿಗೆ ಈ ಪ್ರಶಸ್ತಿ ನೀಡಿದ್ದು ಅತ್ಯಂತ ಸೂಕ್ತ ಆಯ್ಕೆ ಎಂದು ನುಡಿದರು. ಮತ್ತೋರ್ವ ಅತಿಥಿಯಾಗಿ ಆಗಮಿಸಿದ್ಧ ಪ್ರಭಾಕರ್ ಕಾಪಿಕಾಡ್ ಐಕೆ ಹಾಗೂ ಸಿಜಿಕೆ ಜೊತೆ ಕಳೆದ ಬೀದಿನಾಟಕದ ಅನುಭವಗಳನ್ನು ಪ್ರೇಕ್ಷಕರ‌ ಮುಂದೆ ಇಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಆಲ್ವಿನ್ ಸೆರಾವೊರವರು ಪ್ರಸ್ತಾವನೆಗೈದು ನೆರೆದವರೆಲ್ಲಾರನ್ನೂ ಸ್ವಾಗತಿಸಿದರು. ಕ್ರಿಸ್ಟೋಫರ್ ನೀನಾಸಂ ಇಡೀ ಕಾರ್ಯಕ್ರಮದ ಸಂಚಾಲಕತ್ವವನ್ನು ವಹಿಸಿದ್ದರು.

ಕಾರ್ಯಕ್ರಮದ ಮೊದಲು ಪಾದುವ ರಂಗ ಅಧ್ಯಯನ ಕೇಂದ್ರದ ವಿಧ್ಯಾರ್ಥಿಗಳು ಪರಿಸರ ಮಾಲಿನ್ಯ ಹಾಗೂ ಪ್ಲ್ಯಾಸ್ಟಿಕ್ ಪದಾರ್ಥಗಳಿಂದ ಆಗುವ ಅನಾಚಾರಗಳ ಬಗ್ಗೆ ಬೀದಿನಾಟಕವನ್ನು ಅಭಿನಯಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಶಸ್ತಿ ಸಮಾರಂಭ ಕಾರ್ಯಕ್ರಮವನ್ನು ಪಾದುವ ರಂಗ ಅಧ್ಯಯನ ಕೇಂದ್ರ ಆಯೋಜಿಸಿತ್ತು.


Spread the love