ಮಂಗಳೂರು: ಅಕ್ರಮವಾಗಿ ವ್ಯಕ್ತಿಯೋರ್ವರ ಸ್ಥಳಕ್ಕೆ ಪ್ರವೇಶ ದೂರು ದಾಖಲು

Spread the love

ಮಂಗಳೂರು: ಅಕ್ರಮವಾಗಿ ವ್ಯಕ್ತಿಯೋರ್ವರ ಸ್ಥಳಕ್ಕೆ ಪ್ರವೇಶ ಮಾಡಿ ಆವರಣ ಗೋಡೆಗೆ ಹಾನಿಗೊಳಿಸಿದ ಕುರಿತು ಜಾಗದ ಮ್ಹಾಲಕಿ ಸೆಲೈನ್ ಮಿನೇಜಸ್ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

ಮೇ 21 ರಂದುಬೆಳಿಗ್ಗೆ  ಹೆನ್ರಿ ಮಿನೇಜೆಸ್‌‌‌, ಆತನ ಪತ್ನಿ ತಾಯಿ, ಕ್ರಿಸ್ತಿನ್‌‌ ಮಿನೇಜೆಸ್‌‌, ಅಣ್ಣನ ಹೆಂಡತಿ ಸಿಂತಿಯಾ, ಚಿಕ್ಕಪ್ಪ ವಿಕ್ಟರ್‌‌ ಮಿನೇಜಸ್‌‌ ಮತ್ತು ಇತರ ಎರಡು ಜನರೊಂದಿಗೆ  ಪಚ್ಚನಾಡಿಯಲ್ಲಿರುವ ಸೆಲೈನ್‌ ಮೆನೆಜಸ್‌ ರವರ ಬಾಬ್ತು ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರು ನಿರ್ಮಿಸಿದ ಆವರಣ ಗೋಡೆಯ ಸ್ವಲ್ಪ ಭಾಗವನ್ನು ಬಲತ್ಕಾರವಾಗಿ ಕೈಗಳಿಂದ ದೂಡಿ ಹಾಕಿದ್ದು ಅಲ್ಲದೆ ಇನ್ನೂ ಮುಂದೆ ಕಂಪೌಂಡ್‌‌ ಗೋಡೆ ಕಟ್ಟಿದಲ್ಲಿ  ಪಿರ್ಯಾದಿದಾರರ ಕೈಕಾಲು ಮುರಿದು ಹಾಕುವುದಾಗಿ ಬೆದರಿಕೆ ಹಾಕಿ ದೊಣ್ಣೆಯಿಂದ ಹೊಡೆಯಲು ಬಂದಿರುತ್ತಾರೆ , ಹೆನ್ರಿ ಮಿನೇಜೆಸ್‌‌ ಇತರ ಆರೋಪಿಗಳೊಂದಿಗೆ ಪಿರ್ಯಾದಿದಾರರ ಸ್ಥಳಕ್ಕೆ ಅಕ್ರಮ ಪ್ರವೇಶಮಾಡಿ ಕಂಪೌಂಡ್‌‌ ಗೋಡೆಯನ್ನು ಕೆಡವಿ ಹಾಕಿರುವುದರಿಂದ ಪಿರ್ಯಾದಿದಾರರು ಸುಮಾರು 10000 ರೂಪಾಯಿ ನಷ್ಟ ಉಂಟಾಗಿರುತ್ತದೆ ಎಂದು ದೂರು ನೀಡಿದ್ದು ದೂರಿನ ಕುರಿತು ಮಂಗಳೂರು ಗ್ರಾಮಾಂತರ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.


Spread the love