ಮಂಗಳೂರು: ಅಪರಿಚಿತರಿಂದ ಮಸೀದಿಯ ಉಸ್ತಾದರ ಮೇಲೆ ಗಂಭೀರ ಹಲ್ಲೆ

Spread the love

ಮಂಗಳೂರು: ಮಸೀದಿಯ ಉಸ್ತಾದರೋರ್ವರು ರಾತ್ರಿಯ ನಮಾಜ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಧಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.

charmedi ustahd 19-05-2015 13-15-28 charmedi ustahd 19-05-2015 13-15-029 charmedi ustahd 19-05-2015 13-15-030

ಚಾರ್ಮೇಡಿ ಮಸೀದಯ ಉಸ್ತಾದ್ ಸಮೀರ್ ಎಂಬವರು ಸೋಮವಾರ ರಾತ್ರಿ ಸುಮಾರು 10.45 ರ ಸುಮಾರಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ರಾತ್ರಿಯ ನಮಾಜ್ ಮುಗಿಸಿ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಏಕಾಎಕಿ ಬಂದ ದುಷ್ಕರ್ಮಿಗಳು ಸಮೀರ್ ಅವರ ದ್ವಿಚಕ್ರ ವಾಹನವನ್ನು ತಡೆದು ಅವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಸುದ್ದಿ ತಿಳಿದು ಸಮೀರ್ ಅವರ ನೆರವಿಗೆ ಧಾವಿಸಿದ ಸ್ಥಳೀಯರು ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.


Spread the love