ಮಂಗಳೂರು: ಆಯುಷ್ ಹಬ್ಬ- 2015

Spread the love

ಮಂಗಳೂರು: ಕರ್ನಾಟಕ ಸರಕಾರ, ಆಯುಷ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಆಯುಷ್ ಫೌಂಡೇಶನ್, ಮಂಗಳೂರು, ಜಂಟಿಯಾಗಿ ದಿನಾಂಕ 19.12.2015 ಮತ್ತು 20.12.2015ರಂದು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಆಯೋಜಿಸಿರುವ ಆಯುಷ್ ಹಬ್ಬ-2015ರ ಪ್ರಯುಕ್ತ ಪೂರ್ವಭಾವಿಯಾಗಿ ದಿನಾಂಕ 17.12.2015ರಂದು ಸಂಜೆ 3.30ಕ್ಕೆ ಬಂಟ್ಸ್‍ಹಾಸ್ಟೆಲ್ ಗ್ರೌಂಡ್‍ನಿಂದ (ಮಾರ್ಗ: ಬಂಟ್ಸ್‍ಹಾಸ್ಟೆಲ್-ಜ್ಯೋತಿವೃತ್ತ-ಹಂಪನಕಟ್ಟೆ ಸರ್ಕಾರಿ ಕಾಲೇಜು-ಆರ್.ಟಿ.ಓ ವೃತ್ತ) ನೆಹರೂ ಮೈದಾನಕ್ಕೆ (ಫುಟ್‍ಬಾಲ್ ಗ್ರೌಂಡ್) ಆಯುಷ್ ಜಾಥಾ ಹೊರಡಲಿದೆ.

ಈ ಜಾಥಾದಲ್ಲಿ ಆಯುಷ್ ವೈದ್ಯಕೀಯ ಮಹಾವಿದ್ಯಾಲಯದ ಅನೇಕ ವಿದ್ಯಾರ್ಥಿಗಳು ಭಾಗವಹಿಸಿ ಮೆರುಗು ನೀಡಲಿದ್ದಾರೆ. ಜಾಥಾ ಸಂಪನ್ನಗೊಳ್ಳುವ ನೆಹರೂ ಮೈದಾನದ ಫುಟ್‍ಬಾಲ್ ಗ್ರೌಂಡ್‍ನಲ್ಲಿ ಮಂಗಳೂರಿನ ವಿವಿಧ ಯೋಗ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಸಂಖ್ಯೆಯ ಸಾರ್ವಜನಿಕರು ಸಾಮೂಹಿಕ ಯೋಗ ಪ್ರದರ್ಶನ ನೀಡಲಿದ್ದಾರೆ.

ಈ ಜಾಥಾವನ್ನು ಬಂಟರ ಯಾನೆ ನಾಡವರ ಮಾತೃಸಂಘ ಮತ್ತು ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಅಜಿತ್ ಕುಮಾರ್ ರೈ ಮಾಲಾಡಿಯವರು ಧ್ವಜ ಹಾರಿಸಿ ಚಾಲನೆ ನೀಡಲಿದ್ದಾರೆ. ಈ ಜಾಥಾದಲ್ಲಿ ಜಿಲ್ಲೆಯ ಎಲ್ಲಾ ಆಯುಷ್ ವೈದ್ಯರು, ಮುಖ್ಯಸ್ಥರು, ಆಯುಷ್ ಔಷಧಿ ತಯಾರಕರು ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದ್ದು, ಆಯುಷ್ ಹಬ್ಬ -2015ಕ್ಕೆ ಎಲ್ಲಾ ಸಾರ್ವಜನಿಕರ ಸಹಕಾರ ಕೋರಲಾಗಿದೆ. ಆಯುಷ್ ಫೌಂಡೇಶನ್ ಅಧ್ಯಕ್ಷರಾದ ಡಾ| ಆಶಾಜ್ಯೋತಿ ರೈ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ಡಾ. ದೇವದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Mangaluru: Ayush Habba -2015


Spread the love