ಮಂಗಳೂರು: ಇಬ್ಬರು ಕಳ್ಳರ ಬಂಧನ 10 ಲಕ್ಷ ಮೌಲ್ಯದ ಸೊತ್ತು ವಶ

Spread the love

ಮಂಗಳೂರು: ವಿವಿಧ ಕಳ್ಳತನಕ್ಕೆ ಸಂಬಂಧಿಸಿ ಉತ್ತರ ಠಾಣೆಯ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಉತ್ತರ ಭಾರತ ಮೂಲದ ಮೊಹಮ್ಮದ್ ಇಫ್ತಿಕಾರ್ ಆಲಂ (22) ಹಾಗೂ ಮಹಮ್ಮದ್ ಸಬೀರ್ (22) ಎಂದು ಗುರುತಿಸಲಾಗಿದೆ.

police_press-001

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೋಲಿಸ್ ಕಮೀಷನರ್ ಮುರುಗನ್ ಅವರು ಇತ್ತೀಚೆಗೆ ಮೇ 13 ರಂದು ಅಪರಿಚಿತ ವ್ಯಕ್ತಿಗಳು ನಗರದ ಲಕ್ಷ್ಮೀದಾಸ್ ಚಿನ್ನಾಭರಣ ಮಳಿಗೆಯನ್ನು ದೋಚಿದ್ದು, ಅಂತೆಯೇ ಟೂರ್ಸ್ ಮತ್ತು ಟ್ರಾವೆಲ್ ಅಂಗಡಿಯನ್ನು ಕೂಡ ದೋಚಲಾಗಿತ್ತು. ಎರಡೂ ಅಂಗಡಿಗಳಿಂದ ಬೆಳ್ಳಿಯ ಆಭರಣಗಳೂ, ಲ್ಯಾಪ್ ಟಾಪ್, ಮೊಬೈಲ್ ಫೋನ್ ಸೇರಿದಂತೆ ಸುಮಾರು ಹತ್ತು ಲಕ್ಷದ ಸೊತ್ತನ್ನು ದೋಚಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೋಲಿಸರು ಕಳ್ಳತನಕ್ಕೆ ಕಾರಣರಾದ ಮೊಹಮ್ಮದ್ ಇಫ್ತಿಕಾರ್ ಮತ್ತು ಮಹಮ್ಮದ್ ಸಬೀರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳ್ಳತನ ನಡೆಸಿದನ್ನು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ. ಪೋಲಿಸರು ಇವರಿಂದ ಕಳ್ಳತನ ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.  ಇಬ್ಬರೂ ಆರೋಪಿಗಳು ಈ ಮೊದಲು ಕೂಡ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ

ಕಾರ್ಯಾಚರಣೆಯಲ್ಲಿ ಬಂದರು ಠಾಣೆಯ ಶಾಂತರಾಮ, ರಾಮಕೃಷ್ಣ ಮದನ್ ಇನ್ನಿತರರು ಭಾಗವಹಿಸಿದ್ದರು.


Spread the love