ಮಂಗಳೂರು : ಎಲ್ಲಾ ಮಕ್ಕಳು ಹುಟ್ಟಿನಿಂದ ವಿಶ್ವಮಾನವರೇ – ಡಾ||ವರದರಾಜ ಬೆಟ್ಟಂಪಾಡಿ

Spread the love

ಮಂಗಳೂರು: ಹುಟ್ಟುವ ಎಲ್ಲಾ ಮಕ್ಕಳು ವಿಶ್ವ ಮಾನವರೇ, ಅದರೆ ಬೆಳೆಯುತ್ತಾ ಅವರು ಅಲ್ಪ ಮಾನವರಾಗುತ್ತಿದ್ದಾರೆ. ಅವರನ್ನು ಮತ್ತೆ ವಿಶ್ವಮಾನವರನ್ನಾಗಿಸುವುದು ಶಿಕ್ಷಣದಿಂದ ಮತ್ತು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಬೆಟ್ಟಂಪಾಡಿ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ||ವರದರಾಜ ಚಂದ್ರಗಿರಿ ಬೆಟ್ಟಂಪಾಡಿ ಅವರು ಹೇಳಿದ್ದಾರೆ.

ಅವರು ಮಂಗಳವಾರ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸರಕಾರಿ ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯ, ಮಂಗಳೂರು ಇವರ ಆಶ್ರಯದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ “ವಿಶ್ವ ಮಾನವ ದಿನಾಚರಣೆ”ಯ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

kuvempu-

ಜಾತಿ ಮತಗಳ ಭೇದ ಬಿಟ್ಟು ವಿಶ್ವ ಮಾನವರಾಗಲು ನಾವು ಕುವೆಂಪು ಅವರ ಪಂಚಮಂತ್ರಗಳನ್ನು ಹಾಗೂ ಸಪ್ತಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪಂಚ ಮಂತ್ರಗಳೆಂದರೆ ಮನುಜ ಮತ, ವಿಶ್ವ ಪಥ, ಸರ್ವೋದಯ ಮತ್ತು ಪೂರ್ಣದೃಷ್ಟಿ.     ಕುವೆಂಪು ಅವರು ಒಬ್ಬ ಮಹಾನ್ ದಾರ್ಶನಿಕರಾಗಿದ್ದರು, ಅವರೊಬ್ಬ ಕಲಾವಿದರೂ ಹೌದು ಹಾಗೆಯೆ ಮಹಾನ್ ಚಿಂತಕರೂ ಸಹ, ಕುವೆಂಪು ಅವರು ಜನರು ಸ್ವಾತಂತ್ರ್ಯವನ್ನು ಸ್ವೇಚ್ಚಾಚಾರಕ್ಕೆ ಬಳಸದೆ ಅದೊಂದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಗೆ ಮಾಡುತ್ತದೆ ಎಂಬುದನ್ನು ಮಾನವರೆಲ್ಲಾ ಅರಿಯಬೇಕೆಂದು ಪ್ರತಿಪಾದಿಸುತ್ತದ್ದರು ಎಂದು ಬೆಟ್ಟಂಪಾಡಿಯವರು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕರಾದ ಮೊಸೆಸ್ ಜಯಶೇಖರ್ ವಹಿಸಿದ್ದರು. ಕನ್ನಡ ಪ್ರಾಧ್ಯಾಪಕರಾದ ಶಿವಪ್ರಕಾಶ್ ಸ್ವಾಗತಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವಾರ್ತಾ ಇಲಾಖೆಯ ವಾರ್ತಾ ಸಹಾಯಕ ಚಂದ್ರಶೇಖರ ಅಜಾದ್ ಭಾಗವಹಿಸಿದ್ದರು.  ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Spread the love