ಮಂಗಳೂರು: ಕಂಕನಾಡಿ ನಗರ ಠಾಣೆ ಇನ್‌ಸ್ಪೆಕ್ಟರ್‌ ಅಮಾನತು

Spread the love

 ಮಂಗಳೂರು: ಕಂಕನಾಡಿ ನಗರ ಠಾಣೆ ಇನ್‌ಸ್ಪೆಕ್ಟರ್‌ ಅಮಾನತು
 
ಮಂಗಳೂರು: ಅಕ್ರಮ ಮರಳುಗಾರಿಕೆಗೆ ಬೆಂಬಲ, ವಾಸವಿದ್ದ ವಸತಿ ಸಮುಚ್ಚಯದ ನಿವಾಸಿಗಳೊಂದಿಗೆ, ಹಿರಿಯ ಅಧಿಕಾರಿಗಳೊಂದಿಗೆ ಉಡಾಫೆಯಿಂದ ವರ್ತಿಸಿದ್ದಾರೆ ಎನ್ನುವ ಆರೋಪದಲ್ಲಿ ಕಂಕನಾಡಿ ನಗರ ಠಾಣೆಯ ಇನ್‌ಸ್ಪೆಕ್ಟರ್‌ ಎಸ್‌.ಎಚ್‌. ಭಜಂತ್ರಿ ಅವರನ್ನು ಅಮಾನತು ಮಾಡಿ ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಅವರು ಆದೇಶ ಹೊರಡಿಸಿದ್ದಾರೆ.

ಸಹಾಯಕ ಪೊಲೀಸ್‌ ಆಯುಕ್ತೆ ಧನ್ಯಾ ನಾಯಕ್‌ ಅವರು ಜಪ್ಪಿನಮೊಗರು ಕಡೆಕಾರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಾಳಿ ನಡೆಸುವಂತೆ ಭಜಂತ್ರಿ ಅವರಿಗೆ ಸೂಚಿಸಿದ್ದರು. ಆದರೆ ಈ ಆದೇಶವನ್ನು ಅವರು ನಿರ್ಲಕ್ಷಿಸಿದ್ದರು. ಈ ಬಗ್ಗೆ ಎಸಿಪಿಯವರು ಆಯುಕ್ತರಿಗೆ ದೂರು ನೀಡಿದ್ದರು. ಜತೆಗೆ ಅವರು ವಾಸವಾಗಿದ್ದ ಅಪಾರ್ಟ್‌ಮೆಂಟ್‌ ನಿವಾಸಿಗಳೂ ಅವರ ವರ್ತನೆ ಕುರಿತಂತೆ ಆಯುಕ್ತರಿಗೆ ದೂರಿತ್ತಿದ್ದರು. ಕಮಿಷನರ್‌ ಅವರೇ ಭಜಂತ್ರಿ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗಲೂ ಉಡಾಫೆಯಿಂದ ವರ್ತಿಸಿದ್ದಾರೆಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಕಮಿಷನರ್‌ ಅವರು ಭಜಂತ್ರಿ ಅವರನ್ನು ಅಮಾನತುಗೊಳಿಸಿದ್ದಾರೆ.

ಈ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆ ಯಲ್ಲಿದ್ದಾಗಲೂ ಅಧಿಕಾರಿಗಳು, ಸಾರ್ವಜನಿಕರ ಜತೆ ಉಡಾಫೆಯಿಂದ ವರ್ತಿಸಿದ್ದ ಹಿನ್ನೆಲೆಯಲ್ಲಿ ಅವರು ಅಮಾನತುಗೊಂಡಿದ್ದರು.


Spread the love