ಮಂಗಳೂರು: ಕರಾವಳಿ ಉತ್ಸವದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 23-01-2016ರಂದು ನಡೆಯಲಿದೆ

Spread the love

ಮಂಗಳೂರು: ಕರಾವಳಿ ಉತ್ಸವವು 23-01-2016ರಿಂದ 31-01-2016ರವರೆಗೆ ಏರ್ಪಡಿಸಲಾಗಿದೆ. ಕರಾವಳಿ ಉತ್ಸವದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 23-01-2016ರಂದು ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಕದ್ರಿಪಾರ್ಕ್‍ನಿಂದ ಕಲಾ ತಂಡಗಳನ್ನೊಳಗೊಂಡ ಆಕರ್ಷಕ ಮೆರವಣಿಗೆ ಲಾಲ್‍ಬಾಗ್ ಕರಾವಳಿ ಉತ್ಸವ ಮೈದಾನದವರೆಗೆ ಸಂಚರಿಸಲಿದೆ. ಸಂಜೆ 6 ಗಂಟೆಗೆ ವಸ್ತುಪ್ರದರ್ಶನ ಉದ್ಘಾಟನೆಯಾಗಲಿದ್ದು, 6.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ.

 ಕರಾವಳಿ ಉತ್ಸವದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

(1) ವಸ್ತುಪ್ರದರ್ಶನ: ಲಾಲ್‍ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ  ವಸ್ತುಪ್ರದರ್ಶನ ಆಯೋಜಿಸಲಾಗಿದೆ. ಜ.23ರಿಂದ 45 ದಿನಗಳ ಕಾಲ ನಡೆಯುವ ಈ ವಸ್ತುಪ್ರದರ್ಶನದಲ್ಲಿ ವೈವಿಧ್ಯಮಯ ಮನೋರಂಜನಾ ಚಟುವಟಿಕೆಗಳು, ಅಮ್ಯೂಸ್‍ಮೆಂಟ್‍ಗಳು, ಮಾರಾಟ ಮೇಳ, ಮಕ್ಕಳ ಮನರಂಜನಾ ತಾಣಗಳು ಇರಲಿವೆ.

(2) ಸಾಂಸ್ಕøತಿಕ ಕಾರ್ಯಕ್ರಮ: ಕರಾವಳಿ ಉತ್ಸವದ ಪ್ರಮುಖ ಭಾಗವಾಗಿರುವ ಸಾಂಸ್ಕøತಿಕ ಕಾರ್ಯಕ್ರಮಗಳು ಈ ಸಲ ಕರಾವಳಿ ಉತ್ಸವ ಮೈದಾನ ಹಾಗೂ ಕದ್ರಿ ಪಾರ್ಕ್ . ಹೀಗೆ ಎರಡು ಕಡೆ ನಡೆಯಲಿವೆ. ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರತಿಭಾವಂತ ಕಲಾವಿದರ, ಖ್ಯಾತಿವೆತ್ತ ಕಲಾ, ಸಾಂಸ್ಕøತಿಕ ತಂಡಗಳಿಂದ, ಕಲಾವಿದರಿಂದ  ಆಕರ್ಷಕ, ಕಾರ್ಯಕ್ರಮಗಳು ನಡೆಯಲಿವೆ.

(3) ಭಾರ ಎತ್ತುವ ಸ್ಪರ್ಧೆ: ಕರಾವಳಿ ಉತ್ಸವ ಕ್ರೀಡಾಸಮಿತಿ ಹಾಗೂ ದ.ಕ ಜಿಲ್ಲಾ ವೈಟ್‍ಲಿಫ್ಟರ್ಸ್ ಅಸೋಸಿಯೇಶನ್ ಇವರ ಆಶ್ರಯದಲ್ಲಿ ಜ. 27 ಮತ್ತು 28 ರಂದು ಮಂಗಳೂರಿನ ಪುರಭವನದಲ್ಲಿ  ಪುರುಷರ ಮತ್ತು ಮಹಿಳೆಯರ ಜಿಲ್ಲಾ ಮಟ್ಟದ ಭಾರ ಎತ್ತುವ ಸ್ಪರ್ಧೆಯು ನಡೆಯಲಿರುವುದು.     ವಿಜೇತ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆಯೊಂದಿಗೆ ನಗದು ನೀಡಲಾಗುವುದು. ಶಾಲಾ ಕಾಲೇಜುಗಳ ಆಸಕ್ತ ಕ್ರೀಡಾ ಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.  ಸುಮಾರು 28 ತಂಡಗಳ 200 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ.

(4) ಫಲಪುಷ್ಟ ಪ್ರದರ್ಶನ: ವರ್ಷಂಪ್ರತಿ ನಡೆಯುತ್ತಿರುವ ಫಲಪುಷ್ಟ ಪ್ರದರ್ಶನ ಈ ಸಲ ಕರಾವಳಿ ಉತ್ಸವದ ಸಂದರ್ಭದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ದಿನಾಂಕ 23-01-2016ರಂದು ಸಂಜೆ 3 ಗಂಟೆಗೆ ಪ್ರದರ್ಶನ ಉದ್ಘಾಟನೆಯಾಗಲಿದೆ.  ಕದ್ರಿಪಾರ್ಕ್‍ನಲ್ಲಿ ನಡೆಯುವ ಈ ಫಲಪುಷ್ಟ ಪ್ರದರ್ಶನವನ್ನು ಹಿಂದೆಂದೂ ಇಲ್ಲದಷ್ಟು ಆಕರ್ಷಕಯುತವಾಗಿ ಮಾಡಲಾಗುತ್ತಿದೆ. ವಿವಿಧ ನಮೂನೆಯ ಪುಷ್ಟ, ಹಣ್ಣು, ತರಕಾರಿ ಗಿಡಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಲಾಗಿದೆ.

(5)   ಆಹಾರ ಮೇಳ: ಕದ್ರಿಪಾರ್ಕ್‍ನಲ್ಲಿ ಆಹಾರ ಮೇಳ(ಈooಜ ಈesಣ) ಈ ವರ್ಷದ ವಿಶೇಷವಾಗಿದೆ. ಸ್ಥಳೀಯ ಹಾಗೂ ವಿವಿಧ ಖಾದ್ಯಗಳನ್ನೊಳಗೊಂಡ ತಿಂಡಿ ತಿನಿಸು, ಆಹಾರ, ತಂಪು ಪಾನೀಯ, ವಿವಿಧ ರೀತಿಯ ಪೇಯಗಳು, ಮಕ್ಕಳ ತಿನಿಸುಗಳು ಆಹಾರ ಮೇಳದ ಆಕರ್ಷಕವಾಗಿದೆ. ದಿನಾಂಕ 23-01-2016ರಂದು ಸಂಜೆ 3.45ಗಂಟೆಗೆ ಗಂಟೆಗೆ ಆಹಾರ ಮೇಳ ಉದ್ಘಾಟನೆಯಾಗಲಿದೆ.

(6)  ಬೀಚ್ ಉತ್ಸವ: ಬೀಚ್ ಉತ್ಸವವು ಜನವರಿ 30-31ರಂದು ಪಣಂಬೂರು ಬೀಚ್‍ನಲ್ಲಿ ನಡೆಯಲಿದೆ. ಅನುಭವಿ ನೃತ್ಯ ತಂಡಗಳಿಂದ ಆಕರ್ಷಕ ನೃತ್ಯ ಸ್ಪರ್ಧೆ, ಹಾಡುಗಾರಿಕೆ, ಜ.30ರಂದು ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಇದಲ್ಲದೇ, ಬೀಚ್ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿದೆ.

ರಾಷ್ಟ್ರಮಟ್ಟದ ಮೀನು ಹಿಡಿಯುವ ಸ್ವರ್ಧೆ (ಗಾಳ ಹಾಕಿ) ಪಣಂಬೂರು ಬೀಚ್‍ನಲ್ಲಿ ನಡೆಯಲಿರುವುದು ಈ ವರ್ಷದ ಕರಾವಳಿ ಉತ್ಸವದ ವಿಶೇಷವಾಗಿದೆ. ಜ.30-31ರಂದು ಈ ಸ್ಪರ್ಧೆ ನಡೆಯಲಿದೆ.

ಸಾರ್ವಜನಿಕರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕರಾವಳಿ ಉತ್ಸವವನ್ನು ಯಶಸ್ಸುಗೊಳಿಸಲು ವಿನಂತಿಸುತ್ತೇವೆ.


Spread the love