ಮಂಗಳೂರು: ಕಾಲೇಜಿನ ಕ್ವಾಟ್ರರ್ಸ್‌ ನಲ್ಲಿ ಪ್ರೊಫೆಸರ್ ಮೃತದೇಹ ಪತ್ತೆ

ಮಂಗಳೂರು: ಕಾಲೇಜಿನ ಕ್ವಾಟ್ರರ್ಸ್‌ ನಲ್ಲಿ ಪ್ರೊಫೆಸರ್ ಮೃತದೇಹ ಪತ್ತೆ

ಮಂಗಳೂರು: ಖಾಸಗಿ ಕಾಲೇಜಿನ ಕ್ವಾಟ್ರರ್ಸ್‌ನಲ್ಲಿ ಅದೇ ಕಾಲೇಜಿನ ಸಹಾಯಕ ಪ್ರೊಫೆಸರ್‌ವೊಬ್ಬರ ಮೃತದೇಹ ಪತ್ತೆಯಾಗಿದೆ.

ಖಾಸಗಿ ಕಾಲೇಜಿನ ಪ್ರೊಫೆಸರ್ ವಾಗೇಶ್‌ಕುಮಾರ್ (35) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.

ಮೃತ ವ್ಯಕ್ತಿಯ ಸ್ನೇಹಿತ ಮುಸ್ತಫಾ ಎಂಬವರು ಕ್ವಾಟ್ರರ್ಸ್‌ನಲ್ಲಿದ್ದ ವಾಗೇಶ್‌ ಕುಮಾರ್‌ಗೆ ಕರೆ ಮಾಡಿದ್ದಾರೆ. ಹಲವು ಬಾರಿ ಕರೆ ಮಾಡಿದರೂ ಫೋನ್ ತೆಗೆಯದ ಹಿನ್ನೆಲೆಯಲ್ಲಿ ರೂಮ್‌ನ ಬಾಗಿಲನ್ನು ಬಡಿದಿದ್ದಾರೆ. ಈ ವೇಳೆ ರೂಮ್‌ನಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಬಳಿಕ ಪೊಲೀಸರನ್ನು ಕರೆಸಿ, ರೂಮ್‌ನ ಬಾಗಿಲು ಒಡೆದು ನೋಡಿದಾಗ ಪ್ರೊಫೆಸರ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಮೃತದೇಹವನ್ನು ನಗರದ ವೆನ್‌ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮ ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.