ಮಂಗಳೂರು:  ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 

Spread the love

ಮಂಗಳೂರು:  ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 

ಮಂಗಳೂರು:  ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಮಂಗಳೂರು ತಾಲೂಕಿನಲ್ಲಿ ತಾಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆ ಹಾಗೂ ಸುಳ್ಯ ತಾಲೂಕಿನ ಪಂಜ ಹೋಬಳಿಯಲ್ಲಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ತಾತ್ಕಾಲಿಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ಗುತ್ತಿಗೆ ಆಧಾರಿತವಾಗಿದ್ದು ಹಾಗೂ ತಾತ್ಕಾಲಿಕವಾಗಿರುತ್ತದೆ. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳು ಜಂಟಿ ಕೃಷಿ ನಿರ್ದೇಶಕರ ಕಛೇರಿ, ನೆಹರು ಮೈದಾನ ಎದುರು ಮಂಗಳೂರು ಇಲ್ಲಿಗೆ ತಮ್ಮ ವಿವರಗಳನ್ನು ನವೆಂಬರ್ 29ರೊಳಗೆ ಸಲ್ಲಿಸಬಹುದಾಗಿದೆ.

*ವಿದ್ಯಾರ್ಹತೆ*: ತಾಲೂಕು ತಾಂತ್ರಿಕ ವ್ಯವಸ್ಥಾಪಕರು- ಎಂ.ಎಸ್ಸಿ ಕೃಷಿ ಅಥವಾ ಇತರೆ ಕೃಷಿ ಸ್ನಾತಕೋತರ ಪದವಿ ಅಥವಾ ಪದವಿಯನ್ನು ಸರ್ಕಾರಿ ಅನುದಾನಿತ ವಿಶ್ವವಿದ್ಯಾನಿಲಯದ ಅಡಿಯಲ್ಲಿ ತೆಗೆದುಕೊಳ್ಳಬೇಕು ಹಾಗೂ ಕೃಷಿ ವಿಸ್ತರಣೆಯಲ್ಲಿ 2 ವರ್ಷಗಳ ಅನುಭವ ಕಡ್ಡಾಯವಾಗಿರುತ್ತದೆ.

ಸಹಾಯಕ ತಾಂತ್ರಿಕ ವ್ಯವಸ್ಥಾಪಕರು-ಬಿ.ಎಸ್ಸಿ ಕೃಷಿ ಅಥವಾ ಕೃಷಿ ಎಂ.ಎಸ್ಸಿ ಕೃಷಿ ಅಥವಾ ಇತರೆ ಕೃಷಿ ಸ್ನಾತಕೋತರ ಪದವಿ ಅಥವಾ ಪದವಿಯನ್ನು ಸರ್ಕಾರಿ ನೋಂದಾಯಿತ ವಿಶ್ವವಿದ್ಯಾನಿಲಯದ ಅಡಿಯಲ್ಲಿ ತೆಗೆದುಕೊಳ್ಳಬೇಕು ಹಾಗೂ ಕೃಷಿ ವಿಸ್ತರಣೆಯಲ್ಲಿ 1 ವರ್ಷದ ಅನುಭವ ಕಡ್ಡಾಯವಾಗಿರುತ್ತದೆ

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0824-2423604 ಸಂಪರ್ಕಿಸುವಂತೆ ಯೋಜನೆ ನಿರ್ದೇಶಕರು ಆತ್ಮ ಯೋಜನೆ ಹಾಗೂ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Leave a Reply