ಮಂಗಳೂರು:  ಜಿಲ್ಲಾಧಿಕಾರಿಗಳಿಂದ ಕಡತ ವಿಲೇವಾರಿ ಪರಿಶೀಲನೆ 

Spread the love

ಮಂಗಳೂರು:  ಜಿಲ್ಲಾಧಿಕಾರಿಗಳಿಂದ ಕಡತ ವಿಲೇವಾರಿ ಪರಿಶೀಲನೆ 

ಮಂಗಳೂರು: ಉಳ್ಳಾಲ ತಾಲೂಕಿನ ಆರ್‍ಆರ್‍ಟಿ ಮತ್ತು ಎಲ್‍ಎನ್‍ಡಿ, ಕಡತಗಳಿಗೆ ಸಂಬಂಧಿಸಿದಂತೆ ಮಂಗಳೂರು ತಾಲೂಕು ಕಛೇರಿ ಅಭಿಲೇಖಾಲಯದಲ್ಲಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಈ ಸಂದರ್ಭದಲ್ಲಿ ಭೇಟಿ ನೀಡಿ ಪರಿಶೀಲಿಸಿದರು ಮಂಗಳೂರು ತಾಲೂಕು ಕಚೇರಿಯ ಅಭಿಲೇಖಾಲಯದಲ್ಲಿ ಉಳ್ಳಾಲ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳಿಗೆ, ಭೂ ಮಾಪನಾ ಇಲಾಖೆಯ ಸಿಬ್ಬಂದಿಗಳ, ಹಾಗೂ ಭೂದಾನಿ ಯವರ ಸಮ್ಮುಖದಲ್ಲಿ ಆರ್‍ಆರ್‍ಟಿ ಹಾಗೂ ಎಲ್‍ಎನ್‍ಡಿ, ಕಡತಗಳನ್ನು ಶ್ರೀಘ್ರ ವಿಲೇವಾರಿ ಮಾಡುವ ಬಗ್ಗೆ ಸೂಕ್ತ ನಿರ್ದೇಶನ ನೀಡಿದರು.ಆಂದೋಲನವನ್ನು ಯಶಸ್ವಿಯಾಗಿ ನಡೆಯುವಂತೆ ನಿರ್ದೇಶಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಉಪಸ್ಥಿತರಿದ್ದರು.


Spread the love