ಮಂಗಳೂರು ಜಿಲ್ಲಾ ಕಾರಾಗೃಹದಿಂದ ತಪ್ಪಿಸಕೊಂಡ ಕೈದಿ ಸೆರೆ

Spread the love

ಮಂಗಳೂರು ಜಿಲ್ಲಾ ಕಾರಾಗೃಹದಿಂದ ತಪ್ಪಿಸಕೊಂಡ ಕೈದಿ ಸೆರೆ

ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ ಖೈದಿಯನ್ನು ಪೋಲಿಸರು ಪತ್ತೆಹಚ್ಚಿ ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.

ಮಾರ್ಚ್ 10 ರಂದು ಬೆಳಗಿನ ಜಾವ ಮಂಗಳೂರಿನ ಜಿಲ್ಲಾ ಕಾರಾಗೃಹದಿಂದ ಜಿನ್ನಪ್ಪ ಪರವ ಎಂಬ ಕೈದಿ ಪರಾರಿಯಾಗಿದ್ದರು.

ಈತನ ಬಗ್ಗೆ ಹುಡುಕಾಟ ನಡೆಸಿದ ಪೋಲಿಸರು ಸುಳ್ಯ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಎಂಬಲ್ಲಿ ಇರುವನೆಂಬ ಮಾಹಿತಿಪಡೆದು ಅಲ್ಲಿ ತೆರಳಿದ ಪೋಲಿಸ್ ನೀರಿಕ್ಷಕ ಸತೀಶ್, ಸುಳ್ಯ ಉಪನೀರಿಕ್ಷ ಚಂದ್ರಶೇಖರ್, ಸಹಾಯಕ ಪೋಲಿಸ್ ಉಪನಿರೀಕ್ಷಕ ಕೃಷ್ಣಯ ಹಾಗೂ ಸಿಬಂದಿಯವರು ವಶಕ್ಕೆ ಪಡೆದು ಸುಳ್ಯ ಠಾಣೆಗೆ ಕರೆದೊಯ್ದಿದ್ದಾರೆ.


Spread the love