ಮಂಗಳೂರು: ದುಷ್ಕರ್ಮಿಗಳಿಂದ ಕುಂಪಲ ಮಸೀದಿ ಕಲ್ಲು ತೂರಾಟ

Spread the love

ಮಂಗಳೂರು: ಕೆಲವೊಂದು ದುಷ್ಕರ್ಮಿಗಳು ಕುಂಪಲ ಮಸೀದಿಯೊಂದಕ್ಕೆ ಕಲ್ಲು ತೂರಾಟ ನಡೆಸಿದ ಘಟನೆ ಸೋಮವಾರ ಬೆಳಗಿನ ಜಾವ 12.30 ರಿಂದ 4 ಗಂಟೆಯ ನಡುವೆ ವರದಿಯಾಗಿದೆ.

attack_mosque-003 attack_mosque-005

ಕಳೆದ ಫೆಬ್ರವರಿ 25 ರಂದು ಹಿಂದು ಸಮಾಜೋತ್ಸವದ ವೇಳೆಯಲ್ಲಿ ಕೂಡ ಮಸೀದಿಗೆ ಕಲ್ಲು ತೂರಾಟ ನಡೆಸಿದ್ದು ಈ ಕುರಿತು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆದರೆ ಆರೋಪಿಗಳ ವಿರುದ್ದ ಪೋಲಿಸರು ಯಾವುದೇ ಕ್ರಮ ಕೈಗೊಂಡಿಲ್ಲ. ಕ್ರಮ ಕೈಗೊಂಡಲ್ಲಿ ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪೋಲಿಸರ ಬೇಜವ್ಬಾರಿ ಕ್ರಮದಿಂದ ಘಟನೆ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love