ಮಂಗಳೂರು: ದ.ಕ ಜಿಲ್ಲಾ ಪೊಲೀಸ್ ಅಧಿಕಾರಿ/ಸಿಬ್ಬಂಧಿಗಳ ಕಡಲ ಕಿನಾರೆಯಲ್ಲಿ ದೈಹಿಕ ಕಸರತ್ತು

Spread the love

ಮಂಗಳೂರು: ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ದೈಹಿಕ ಕ್ಷಮತೆ ಮತ್ತು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಅಧಿಕಾರಿ/ಸಿಬ್ಬಂಧಿಗಳಿಗೆ ಪ್ರತೀ ವಾರ ಕವಾಯತನ್ನು ನಡೆಸಲಾಗುತ್ತಿದೆ. ಇದೇ ಮೊದಲ ಬಾರಿಗೆ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಶರಣಪ್ಪ.ಎಸ್.ಡಿ, ಐಪಿಎಸ್ ರವರು ತಮ್ಮ ಅಧಿಕಾರಿ/ಸಿಬ್ಬಂಧಿಗಳಿಗೆ ದಿನಾಂಕ 08-01-2016 ರಂದು ವಾರದ ಕವಾಯತಿನ ಬದಲಾಗಿ ವಿನೂತನ Beach Walk and Run ಕೈಗೊಂಡಿರುತ್ತಾರೆ.

1 2

Beach Walk and Run  ನ್ನು ಮಂಗಳೂರು ನಗರದ ಪಣಂಬೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂಧರ್ಭದಲ್ಲಿ ಕುದುರೆಮುಖ ಜಂಕ್ಷನ್ (ಪಣಂಬೂರು) ನಿಂದ ತಣ್ಣೀರು ಬಾವಿ ವರೆಗೆ ಸುಮಾರು 7ಕಿ.ಮೀ ವರೆಗೆ ಓಟ ಮತ್ತು ನಡಿಗೆ ಯನ್ನು ನಡೆಸಿ, ಬಳಿಕ ಶಾರೀರಿಕ ವ್ಯಾಯಾಮ ಹಾಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.


Spread the love