ಮಂಗಳೂರು ನಗರದ ನೂತನ ಪೋಲಿಸ್ ಆಯುಕ್ತರಾಗಿ ಟಿ. ಆರ್. ಸುರೇಶ್ ಅಧಿಕಾರ ಸ್ವೀಕಾರ

Spread the love

ಮಂಗಳೂರು ನಗರದ ನೂತನ ಪೋಲಿಸ್ ಆಯುಕ್ತರಾಗಿ ಟಿ. ಆರ್. ಸುರೇಶ್ ಅಧಿಕಾರ ಸ್ವೀಕಾರ

ಮಂಗಳೂರು: ಮಂಗಳೂರು ನಗರದ ನೂತನ ಪೋಲಿಸ್ ಆಯುಕ್ತರಾಗಿ ಟಿ. ಆರ್. ಸುರೇಶ್ ಸೋಮವಾರ ನಿರ್ಗಮನ ಆಯುಕ್ತ ಚಂದ್ರಶೇಖರ ಅವರಿಂದ ಅಧಿಕಾರ ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು ಮಂಗಳೂರಿನಲ್ಲಿ ಸೇವೆ ಸಲ್ಲಿಸಲು ಸಿಕ್ಕಿದ್ದು ಒಂದು ಉತ್ತಮ ಅವಕಾಶವಾಗಿದೆ. ನಗರದ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಿಸಲು ನನ್ನ ಶಕ್ತಿ ಮೀರಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ನಗರ ವ್ಯಾಪ್ತಿಯಲ್ಲಿ ಜನಸ್ನೇಹಿ ಪೋಲಿಸ್ ವ್ಯವಸ್ಥೆಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು.

ಮೂಲತಃ ಶಿವಮೊಗ್ಗ ಜಿಲ್ಲೆಯವರದಾದ ಸುರೇಶ್ ಅವರು 1991 ರಲ್ಲಿ ಡಿವೈಎಸ್ಪಿಯಾಗಿ ಬಿಜಾಪುರದಲ್ಲಿ ಸೇವೆ ಆರಂಭಿಸಿ, ಬಾಗಲಕೋಟೆ, ಉತ್ತರಕನ್ನಡ, ಹುಬ್ಬಳ್ಳಿ-ಧಾರವಾಡ, ಮೈಸೂರು, ತುಮಕೂರು, ಬೆಳಗಾವಿ, ಕೊಡಗು, ಬಾಗಲಕೋಟೆ, ರಾಯಚೂರು, ಬೆಂಗಳೂರು ನಗರ ಉತ್ತರ, ಅಗ್ನಿಶಾಮಕ ದಳ ಹಿತೆ ಸುಮಾರು 26 ವರ್ಷ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಇದೇ ವೇಳೆ ಮಾತನಾಡಿದ ನಿರ್ಗಮನ ಆಯುಕ್ತ ಚಂದ್ರಶೇಖರ್ ಅವರು  ಸುಮಾರು 1 ವರ್ಷ ಆರು ತಿಂಗಳು ನಗರದ ಆಯುಕ್ತರಾಗಿ ಸೇವೆ ಸಲ್ಲಿಸಿದ್ದು, ಸಂತೋಷ ತಂದಿದೆ. ಆರಂಭದಲ್ಲಿ ಮಂಗಳೂರು ನನಗೆ ಅಪರಿಚಿತವಾಗಿದ್ದು, ಇಲ್ಲಿನ ಜನತೆ ಹಾಗೂ ಸಹೋದ್ಯೋಗಿಗಳ ನೆರವಿನಿಂದ ಬಹುವೇಗದಲ್ಲಿ ಹೊಂದಿಕೊಂಡು ಕೆಲಸ ಮಾಡಲು ಸಾಧ್ಯವಾಯಿತು. ಮಂಗಳೂರಿನಲ್ಲಿ ಕಾನೂನಿಗೆ ಗೌರವಿಸುವವರು ಇದ್ದದ್ದರಿಂದ ಸರಾಗವಾಗಿ ಕೆಲಸ ಮಾಡಲೂ ಸಾಧ್ಯವಾಯಿತಾದರೂ ಸಮಾಜದ ಕೆಲವೊಂದು ದುಷ್ಟಶಕ್ತಿಗಳು ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗಳನ್ನು ಹದಗೆಡಿಸಲು ಪ್ರಯತ್ನಿಸದರೂ ಕಾನೂನಿನ ಚೌಕಟ್ಟಿನಲ್ಲಿ ಅವರನ್ನು ನಿಯಂತ್ರಿಸಲು ಶಕ್ತಿ ಮೀರಿ ಪ್ರಯತ್ನಿಸಿರುತ್ತೇನೆ. ಪೋಲಿಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಆರಂಭಿಸಿದ ಫೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇದರಿಂದ ಸಾರ್ವಜನಿಕರಿಗೆ ನೇರವಾಗಿ ತಮ್ಮ ಸಮಸ್ಯೆಗಳನ್ನು ತಿಳಿಸಲು ವೇದಿಕೆ ಕಲ್ಪಿಸಿ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಿದೆ. ತನ್ನ ಅವಧಿಯಲ್ಲಿ ಸಹಕರಿಸಿದ ಸರ್ವರಿಗೂ ಧನ್ಯವಾದಗಳು ಎಂದರು.


Spread the love