ಮಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ಟಿ.ಆರ್.ಸುರೇಶ್ ಮರು ನಿಯೋಜನೆ

Spread the love

ಮಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ಟಿ.ಆರ್.ಸುರೇಶ್ ಮರು ನಿಯೋಜನೆ

ಮಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಅಗ್ನಿಶಾಮಕ ದಳದ ಡಿಐಜಿಯಾಗಿ ವರ್ಗಾವಣೆಗೊಂಡಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರನ್ನು ಮರು ನಿಯೋಜನೆ ಮಾಡಿ ರಾಜ್ಯ ಸರಕಾರ ಆದೇಶ ಮಾಡಿದೆ.

ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡಮಿಯ ಐಜಿಪಿ ಮತ್ತು ನಿರ್ದೇಶಕರಾಗಿದ್ದ ವಿಪುಲ್ ಕುಮಾರ್ ಅವರನ್ನು ಚುನಾವಣಾ ಆಯೋಗವು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ವರ್ಗಾಯಿಸಲಾಗಿತ್ತು. ಇದೀಗ ಟ.ಆರ್.ಸುರೇಶ್ ಮತ್ತು ವಿಫುಲ್ ಕುಮಾರ್ ಅವರನ್ನು ಸ್ವಾಸ್ಥಾನಕ್ಕೆ ಮರಳಿಸಿ ಆದೇಶ ಹೊರಡಿಸಲಾಗಿದೆ.


Spread the love