ಮಂಗಳೂರು: ನೇಪಾಳ ಭೂಕಂಪ ಪೀಡಿತರ ನೆರವಿಗಾಗಿ ಯಾಚನೆ

Spread the love

ಮಂಗಳೂರು: ಭಾರತೀಯ ಜನತಾ ಪಾರ್ಟಿಯ ರಾಜ್ಯ ಕೇಂದ್ರದಿಂದ ನೀಡಿದ ಕರೆಯಂತೆ ನೇಪಾಳದ ಭೂಕಂಪ ಸಂತ್ರಸ್ಥರ ಪರಿಹಾರಾರ್ಥವಾಗಿ ಏ.28, 29 ರಂದು ದ.ಕ.ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಪ್ರತೀ ಮಂಡಲಗಳಲ್ಲೂ ತಂಡಗಳಲ್ಲಿ ಭೂಕಂಪ ಸಂತ್ರಸ್ಥರ ನೆರವಿಗಾಗಿ ನಿಧಿ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಳ್ಳುವರು. ಭೂಕಂಪ ಪೀಡಿತರ ಸಹಾಯಾರ್ಥವಾಗಿ ಸಂಗ್ರಹಣಾ ಕಾರ್ಯದಲ್ಲಿ ಕಾರ್ಯಕರ್ತರೆಲ್ಲರೂ ತೊಡಗಿಸಿಕೊಳ್ಳುವಂತೆ ಮತ್ತು ಸಾರ್ವಜನಿಕರು ತಮ್ಮಲ್ಲಿ ಬಂದಾಗ ಸದ್ರಿ ಸಂಗ್ರಹಣಾ ನಿಧಿಗೆ ಮಾನವೀಯ ನೆಲೆಯಲ್ಲಿ ನೆರವಿನ ಹಸ್ತವನ್ನು ನೀಡಬೇಕಾಗಿ ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಪ್ರತಾಪ್ಸಿಂಹ ನಾಯಕರು ಪತ್ರಿಕಾ ಪ್ರಕಟಣೆಯೊಂದರ ಮೂಲಕ ವಿನಂತಿಸಿದ್ದಾರೆ.


Spread the love