ಮಂಗಳೂರು: ಪರಿಣಾಮಕಾರಿ ಜೀವನ ನಿರ್ವಹಣೆ ವಿಚಾರಗೋಷ್ಠಿ

Spread the love

ಮಂಗಳೂರು: ಸ್ವಾಮಿ ವಿವೇಕಾನಂದರ 153ನೇ ಜನ್ಮ ದಿನೋತ್ಸವದ ಪ್ರಯುಕ್ತ ಮಂಗಳೂರು ರಾಮಕೃಷ್ಣ ಮಠವು ಜನವರಿ 13ರಂದು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ‘ಪರಿಣಾಮಕಾರಿ ಜೀವನ ನಿರ್ವಹಣೆ’ ಎಂಬ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ನಿಟ್ಟೆ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಎನ್.ವಿನಯ್ ಹೆಗಡೆಯವರು ಉದ್ಘಾಟಿಸಲಿದ್ದಾರೆ. ಶ್ರೀ ಎಮ್.ಚಂದ್ರಶೇಖರ್ (ಮುಖ್ಯ ಪೋಲೀಸ್ ಆಯುಕ್ತರು, ಮಂಗಳೂರು ನಗರ)ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶ್ರೀ ಮಂಜುನಾಥ ಭಂಡಾರಿ (ಛೇರ್ಮನ್, ಭಂಡಾರಿ ಫೌಂಡೇಷನ್, ಮಂಗಳೂರು)ರವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್‍ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ಈ ಎಲ್ಲ ಕಾರ್ಯಕ್ರಮಗಳು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಜರುಗಲಿವೆ. ಪೂಜ್ಯ ಸ್ವಾಮಿ ಶುದ್ಧಿದಾನಂದಜೀ ಮಹಾರಾಜ್‍ರವರು (ಅದ್ವೈತ ಆಶ್ರಮ, ಕೋಲ್ಕತ್ತ), ಡಾ. ವಿವೇಕ್ ಮೋದಿ ಹಾಗೂ ಪ್ರೊ. ಕೆ.ರಘೋತ್ತಮ ರಾವ್‍ರವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ.

ಸುಮಾರು 700 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆಸಕ್ತ ಯುವಕರು ಆಶ್ರಮವನ್ನು ಸಂಪರ್ಕಿಸಬಹು. ವಿವರಗಳುಳ್ಳ ಆಮಂತ್ರಣ ಪತ್ರಿಕೆಯನ್ನು ಲಗತ್ತಿಸಲಾಗಿದೆ. ಕಾರ್ಯಕ್ರಮವು ಸರಿಯಾಗಿ 9.30ಕ್ಕೆ ಪ್ರಾರಂಭವಾಗಲಿದೆ.


Spread the love