ಮಂಗಳೂರು: ಕಂಕನಾಡಿ ಶಂಕರಿ ರೈ ಮನೆಯಲ್ಲಿ ಕಳ್ಳತನ ಆರೋಪಿಗಳ ಬಂಧನ

Spread the love

ಮಂಗಳೂರು:  ಪಾಂಡೇಶ್ವರ ಠಾಣೆಯಲ್ಲಿ ವರದಿಯಾದ ಮನೆ ಕಳವು ಪ್ರಕರಣವೊಂದರಲ್ಲಿ,  ಮಂಗಳೂರು ಪಾಂಡೇಶ್ವರ ಠಾಣೆಯ ಪೊಲೀಸರು  ಪ್ರಕರಣದ ದಾಖಲಾದ ಮೂರು ದಿನಗಳ ಒಳಗೆ ಪ್ರಕರಣದ ಆರೋಪಿಗಳನ್ನು ದಾವಣಗೆರೆಯಲ್ಲಿ  ಬಂಧಿಸಿ, ಕಳವು ಮಾಡಿದ   ಸುಮಾರು 48,40,000 ರೂ /- ರೂಪಾಯಿ ಬೆಲೆ ಬಾಳುವ ಪುರಾತನ ಕಾಲದ ವಜ್ರ ಆಳವಡಿಸಿದ ಚಿನ್ನಾಭರಣಗಳನ್ನು ಯಥಾಸ್ಥಿತಿಯಲ್ಲಿ ವಶಪಡಿಸಿಕೊಂಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ

ಬಂಧಿತರನ್ನು  ದಾವಣಗೆರೆ ನಿವಾಸಿಗಳಾದ ಪಾರ್ವತಿ ಪ್ರಾಯ 28 ಹಾಗೂ ಪುಟ್ಟರಾಜು ಪ್ರಾಯ 42 ವರ್ಷ ಎಂದು ಗುರುತಿಸಲಾಗಿದೆ,

ಘಟನೆಯ ವಿವರ

ದಿನಾಂಕ:31-08-2015 ರಂದು  ಮಂಗಳೂರು ಕಂಕನಾಡಿ ನಿವಾಸಿ ಶ್ರೀಮತಿ ಶಂಕರಿ ರೈ  ಎಂಬವರು ತನ್ನ ಮನೆಯ  ಬೆಡ್ ರೂಮ್ ನಲ್ಲಿರುವ ಡ್ರೆಸ್ಸಿಂಗ್ ಟೇಬಲ್ ನ ಬಾಕ್ಸ್ ನಲ್ಲಿ ಇಟ್ಟಿದ್ದ ಸುಮಾರು 48,40,000 ರೂ /- ರೂಪಾಯಿ ಬೆಲೆ ಬಾಳುವ   ಹಳೆಯ ವಜ್ರ ಅಳವಡಿಸಿದ ಚಿನ್ನಾಭರಣಗಳು ಕಳವಾದ ಬಗ್ಗೆ ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದರು.  ಈ ಪ್ರಕರಣದ ತನಿಖೆ ನಡೆಸಿದ ಮಂಗಳೂರು ಪಾಂಡೇಶ್ವರ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ದಿನಕರ ಶೆಟ್ಟಿರವರು  ಈ ಮನೆಗೆ ಅಂಶಕಾಲಿಕವಾಗಿ ಮನೆ ಕೆಲಸಕ್ಕೆ ಬರುತ್ತಿದ್ದ ಪಾರ್ವತಿ ಎಂಬವಳ ಮೇಲೆ ಸಂಶಯಗೊಂಡು ಆಕೆಯನ್ನು ವಿಚಾರಿಸಲು ಹೋದಾಗ, ಆಕೆಯು ಮಂಗಳೂರು ಬಜಾಲ್ ನಲ್ಲಿದ್ದ ವಾಸ್ತವ್ಯದ ಮನೆಯನ್ನು ಖಾಲಿ ಮಾಡಿ ತಲೆಮರೆಸಿಕೊಂಡಿದ್ದಳು.  ಅಲ್ಲದೇ  ತಾನು ವಾಸ್ತವ್ಯವಿದ್ದ ಮನೆಯ ಮಾಲಿಕರಿಗೆ  ತನ್ನ ಸರಿಯಾದ ವಿಳಾಸವನ್ನು ಕೂಡಾ ನೀಡಿರುವುದಿಲ್ಲ.  ಬಳಿಕ ಗುಪ್ತ ಮಾಹಿತಿ ನೆಲೆಯೊಂದರಲ್ಲಿ ದಾವಣಗೆರೆ ತಾಲೂಕಿನ ನಿಟ್ಟು ವಳ್ಳಿ ಡಾಂಗೆ ಪಾರ್ಕ್ ಲೆನಿನ್  ಬಳಿ ಸಂಬಂಧಿಕರ ಮನೆಯೊಂದರಲ್ಲಿ  ತಲೆಮರೆಸಿಕೊಂಡಿದ್ದ  ಆರೋಪಿ ಪಾರ್ವತಿ ಹಾಗೂ  ಅವಳೊಂದಿಗೆ ಕಳವು ಪ್ರಕರಣದಲ್ಲಿ ಶಾಮಿಲಾದ ಆಕೆಯ ಗಂಡ ಪುಟ್ಟು ರಾಜು ಎಂಬವರನ್ನು ಈ ದಿನ ದಿನಾಂಕ:03-09-2015 ರಂದು ಬೆಳಿಗ್ಗೆ ಕಳವು ಮಾಡಿ ಹೋಗಿದ್ದ ಸೊತ್ತು ಸಮೇತ ಬಂಧಿಸಿ  ಈ ಕೆಳಕಂಡ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.  ಆರೋಪಿಗಳು ಸುಮಾರು 15 ವರ್ಷಗಳಿಂದ ಮಂಗಳೂರು ನಗರದಲ್ಲಿ ಅಲ್ಲಲ್ಲಿ  ಕೆಲಸ ಮಾಡುತ್ತಿದ್ದು,  ಕೆಲಸ ಮಾಡುವ ಸ್ಥಳದಲ್ಲಿ ತನ್ನ ಸರಿಯಾದ ವಿಳಾಸವನ್ನು ನೀಡದೇ ಸುಮಾರು 3-4 ತಿಂಗಳಿಗೊಮ್ಮೆ ತಾವು ಕೆಲಸ ಮಾಡುವ ಸ್ಥಳಗಳನ್ನು ಹಾಗೂ ತಮ್ಮ ವಾಸ್ತವ್ಯದ ಮನೆಗಳನ್ನು ಬದಲಾಯಿಸುವ ಸ್ವಭಾವದವರಾಗಿರುತ್ತಾರೆ.

ಬಂಧಿತರಿಂದ ಬ್ಲೂ ಜಾಗರ್ಸ್ ವಜ್ರ ಅಳವಡಿಸಿರುವ ಚಿನ್ನದ ಬೆಂಡೋಲೆ  ಒಂದು ಜೊತೆ, ವಜ್ರ ಅಳವಡಿಸಿರುವ ಚಿನ್ನದ   ಉಂಗುರ- 2, ಗ್ರೀನ್ ಸ್ಟೋನ್ ನ ಚಿನ್ನದ ಉಂಗುರ- 1, ರೆಡ್ ರೂಬಿಸ್ ಸ್ಟೋನ್ ನ ಚಿನ್ನದ ಬಳೆ- 1, ತಲಾ 8 ಗ್ರಾಂ ತೂಕದ ಚಿನ್ನದ ಬಳೆಗಳು -6,4 ದೊಡ್ಡ ಹವಳ ಅಳವಡಿಸಿರುವ ಚಿನ್ನದ ಕರಿಮಣಿ ಸರ -1 ಇತ್ಯಾದಿಗಳನ್ನ ವಶಪಡಿಸಿಕೊಳ್ಳಲಾಗಿದೆ,

ಪೊಲೀಸ್ ಆಯುಕ್ತರಾದ ಶ್ರೀ ,ಎಸ್ ಮುರುಗನ್ IPS, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ  ಉಪ ಪೊಲೀಸ್ ಆಯುಕ್ತರಾದ ಶ್ರೀ ಕೆ.ಎಂ ಶಾಂತರಾಜ್, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ| ಸಂಜೀವ .ಎಂ ಪಾಟೀಲ್ ಹಾಗೂ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಆರ್,ಆರ್ ಕಲ್ಯಾಣ ಶೆಟ್ಟಿ, ಇವರ ಮಾರ್ಗದರ್ಶನದಲ್ಲಿ  ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ದಿನಕರ ಶೆಟ್ಟಿಯರವರು ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ಸ್ವಾದೀನಪಡಿಸಿಕೊಂಡಿರುತ್ತಾರೆ. ಆರೋಪಿ ಹಾಗೂ ಸೊತ್ತು ಪತ್ತೆಗೆ ದಕ್ಷಿಣ ಠಾಣಾ ಕಾನೂನು ಸುವ್ಯವಸ್ಥೆಯ ಪಿಎಸ್ಐ ಮಹಮ್ಮದ್ ಶರೀಫ್  ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ  ಪತ್ತೆ ವಿಭಾಗದ ಪೊಲೀಸ್  ಉಪ ನಿರೀಕ್ಷಕರಾದ ಅನಂತ ಮುರ್ಡೇಶ್ವರವರು ಸಿಬ್ಬಂದಿಗಳಾದ, ,ವಿಶ್ವನಾಥ, ಗಂಗಾಧರ, ಧನಂಜಯ, ಸತ್ಯನಾರಾಯಣ  ಶಶಿಧರ್ ಶೆಟ್ಟಿ, ನೂತನ್ ಕುಮಾರ್  ಪ್ರದೀಪ್ ಕುಮಾರ್ ರೈ ಚಂದ್ರಶೇಖರ ಪುರುಷೋತ್ತಮ ಸುನಿಲ್ ಕುಮಾರ್  ವಿಶ್ವನಾಥ  ಶರತ್ ಕುಮಾರ್ ಮಹಿಳಾ ಸಿಬ್ಬಂದಿಗಳಾದ  ವೈಶಾಲಿ, ಜರೀನಾ ಗಣಕ ಯಂತ್ರ ವಿಭಾಗದ ಮನೋಜ್ ಕುಮಾರ್ ,ಸುನೀಲ್ ಪಿರೇರಾರವರು  ಆರೋಪಿ ಮತ್ತು ಪತ್ತೆಗೆ ಸಹಕರಿಸಿದರು.


Spread the love