ಮಂಗಳೂರು: ಪಿಲಿಕುಳಕ್ಕೆ ಸಿಂಹ ಬಾಲದ ಕಪಿಗಳ ಆಗಮನ

Spread the love

ಮಂಗಳೂರು: ಅಪರೂಪದ ಒಂದು ಜೊತೆ ಸಿಂಹ ಬಾಲದ ಕಪಿಗಳು ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಸೇರ್ಪಡೆಯಾಗಿವೆ. ಕೇರಳದ ಪರಶಿನಕಡವು ಮೃಗಾಲಯದಿಂದ ಇವುಗಳನ್ನು ತರಲಾಗಿವೆ.

2-monkey-pilikula-20160122-001 3-monkey-pilikula-20160122-002 4-monkey-pilikula-20160122-003

ಸಿಂಹಬಾಲದ ಕಪಿಗಳು ಅವಸಾನದ ಅಂಚಿನಲ್ಲಿರುವ ಪ್ರಭೇಧವಾಗಿದ್ದು, ಇವು ಪಶ್ಚಮ ಘಟ್ಟಕೆ ಮಾತ್ರ ಸೀಮಿತವಾಗಿವೆ. ನಿತ್ಯಹರಿದ್ವರ್ಣದ ಕಾಡಿನಲ್ಲಿ ಕಾಣಸಿಗುವ ಇವು ಕೇರಳದ “ಸೈಲೆಂಟ್ ವ್ಯಾಲಿ”, ಆಗುಂಬೆ, ಇತ್ಯಾದಿ ಕೆಲವೇ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಇವು ಅರಣ್ಯದಲ್ಲಿ ಎತ್ತರದ ಮರಗಳ ತುದಿಗಳಲ್ಲಿ ಹಿಂಡಾಗಿ ವಾಸಿಸುತ್ತವೆ.

ಒಂದು ವಾರದ ನಂತರ ಸಾರ್ವಜನಿಕರ ವೀಕ್ಷಣೆಗೆ ತೆರೆದಿಡಲಾಗುದು


Spread the love