ಮಂಗಳೂರು ಬಾಂಬ್ ಪ್ರಕರಣ: ಆದಿತ್ಯರಾವ್ 10 ದಿನ ಪೊಲೀಸ್ ಕಸ್ಟಡಿಗೆ

Spread the love

ಮಂಗಳೂರು ಬಾಂಬ್ ಪ್ರಕರಣ: ಆದಿತ್ಯರಾವ್ 10 ದಿನ ಪೊಲೀಸ್ ಕಸ್ಟಡಿಗೆ

ಮಂಗಳೂರು: ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಆರೋಪಿ ಆದಿತ್ಯ ರಾವ್‌ನನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಗುರುವಾರ 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಬೆಂಗಳೂರಿನಿಂದ ಬುಧವಾರ ರಾತ್ರಿ ಕರೆತಂದಿದ್ದ ಮಂಗಳೂರು ಪೊಲೀಸರು, ಆರೋಪಿಯನ್ನು ಮಂಗಳೂರಿನ ಪ್ರಥಮ ದರ್ಜೆ 6ನೇ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ನ್ಯಾಯಾಧೀಶ ಕೆ.ಎನ್. ಕಿಶೋರ್ ಕುಮಾರ್ ಕೆ.ಎನ್. ಆದೇಶ ನೀಡಿದ್ದಾರೆ.

ಬುಧವಾರ ಬೆಳಗ್ಗೆ ಆದಿತ್ಯರಾವ್ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಹೋಗಿ ಶರಣಾಗಿದ್ದನು.


Spread the love