ಮಂಗಳೂರು: ಮುಕ್ಕ ಚರ್ಚಿನ ಧರ್ಮಗುರು ವಂ ತೋಮಸ್ ಡಿ’ಸೋಜಾ ನಿಧನ

Spread the love

ಮಂಗಳೂರು: ಮುಕ್ಕ ಚರ್ಚಿನ ಧರ್ಮಗುರು ವಂ ತೋಮಸ್ ಡಿ’ಸೋಜಾ ಅವರು ಹೃದಯಾಘಾತದಿಂದ ಬುಧವಾರ ನಿಧನ ಹೊಂದಿದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.

fr thomas

ಮೂಲತಃ ಬೆಳ್ತಂಗಡಿಯವರಾದ ವಂ ತೋಮಸ್ ಅವರು ಜನವರಿ 18, 1955 ರಲ್ಲಿ ಜಾಕೋಬ್ ಹಾಗೂ ಕ್ರಿಸ್ತಿನ್ ದಂಪತಿಗಳ ಪುತ್ರರಾಗಿ ಜನಿಸಿದರು.

1982 ಮೇ 4 ರಂದು ಗುರುದೀಕ್ಷೆ ಪಡೆದ ಅವರು ವಾಲೆನ್ಸಿಯಾ, ಕಾರ್ಕಳ ಟೌನ್, ಕುಲಶೇಖರ ಚರ್ಚುಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದು, 1985-92 ರ ತನಕ ಸಂಪಾಜೆ ಚರ್ಚಿನ ಧರ್ಮಗುರುಗಳಾಗಿ ಸೇವೆ ನೀಡಿದ್ದರು. ಬಳಿಕ ಕೊಡಿಯಾಲ್ ಬೈಲ್ ಪ್ರೆಸ್ ಇದರ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ 7 ವರ್ಷ ಬೈಂದೂರು ಹಾಗೂ ಪೆರ್ಮನ್ನೂರು ಚರ್ಚುಗಳಲ್ಲಿ ಸೇವೆ ಸಲ್ಲಿಸಿ 2013 ರಲ್ಲಿ ಮುಕ್ಕ ಚರ್ಚಿನ ಧರ್ಮಗುರುಗಳಾಗಿ ಅಧಿಕಾರ ವಹಿಸಿಕೊಂಡಿದ್ದರು.

ಮೃತರ ಅಂತ್ಯಕ್ರಿಯೆ ಜುಲೈ 9 ರಂದು ಮುಕ್ಕ ಚರ್ಚಿನಲ್ಲಿ ಸಂಜೆ 4 ಗಂಟೆಗೆ ನೆರವೇರಲಿದೆ


Spread the love