ಮಂಗಳೂರು: ರೌಡಿ ಶೀಟರ್ ನ ಬಂಧನದ ವೇಳೆ ಸ್ವರಕ್ಷಣೆಗಾಗಿ ಪೊಲೀಸರಿಂದ ಶೂಟೌಟ್

ಮಂಗಳೂರು: ರೌಡಿ ಶೀಟರ್ ನ ಬಂಧನದ ವೇಳೆ ಸ್ವರಕ್ಷಣೆಗಾಗಿ ಪೊಲೀಸರಿಂದ ಶೂಟೌಟ್

ಮಂಗಳೂರು:  ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ರೌಡಿ ಶೀಟರ್ ನನ್ನು ಬಂಧಿಸುವ ಸಂದರ್ಭ ಪೊಲೀಸರು ಸ್ವರಕ್ಷಣೆಗಾಗಿ ಗುಂಡು ಹಾರಾಟ ನಡೆಸಿದ ಘಟನೆ ಇಂದು ಬೆಳಗ್ಗೆ ಅಡ್ಯಾರ್ ಬಳಿ ನಡೆದಿದೆ.

ಆರೋಪಿಯನ್ನು ರೌಡಿ ಶೀಟರ್ ಭವಿತ್ ರಾಜ್ ಎಂದು ಗುರುತಿಸಲಾಗಿದೆ. ತಲವಾರು ದಾಳಿ ಪ್ರಕರಣದ ಆರೋಪಿಯಾಗಿರುವ ಭವಿತ್ ರಾಜ್ ಅಡ್ಯಾರ್‌ನಲ್ಲಿರುವ ಬಗ್ಗೆ ಸುಳಿವು ಪಡೆದ ಪೊಲೀಸರು ಆತನ ಬಂಧನಕ್ಕೆ ಇಂದು ಬೆಳಗ್ಗೆ ಬಲೆ ಬೀಸಿದ್ದರು. ಈ ಸಂದರ್ಭ ಭವಿತ್ ರಾಜ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಆಗ ಸ್ವರಕ್ಷಣೆಗಾಗಿ ಕಂಕನಾಡಿ ಠಾಣಾಧಿಕಾರಿ ಭವಿತ್ ರಾಜ್ ಮೇಲೆ ಗುಂಡು ಹಾರಿಸಿದ್ದರೆನ್ನಲಾಗಿದೆ.

ರೌಡಿ ಶೀಟರ್ ಆಗಿರುವ ಭವಿತ್ ರಾಜ್ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.