ಮಂಗಳೂರು ವಿಮಾನ ನಿಲ್ದಾಣ ಟ್ಯಾಕ್ಸಿಯವರಿಂದ ಓಲಾ ಕ್ಯಾಬ್ ಚಾಲಕನ ಮೇಲೆ ಹಲ್ಲೆ

ಮಂಗಳೂರು ವಿಮಾನ ನಿಲ್ದಾಣ ಟ್ಯಾಕ್ಸಿಯವರಿಂದ ಓಲಾ ಕ್ಯಾಬ್ ಚಾಲಕನ ಮೇಲೆ ಹಲ್ಲೆ

ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಪೋರ್ಟ್ ಟ್ಯಾಕ್ಸಿ ಚಾಲಕರಿಂದ ಓಲಾ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಬುಧವಾರ ಸಂಭವಿಸಿದೆ.

ಹಲ್ಲೆಗೊಳಗಾದ ಚಾಲಕನನ್ನು ರತನ್ ಎಂದು ಗುರುತಿಸಲಾಗಿದೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ಓಲಾ ಟ್ಯಾಕ್ಸಿ ನಿಲುಗಡೆ ಕೇಂದ್ರಕ್ಕೆ ನುಗ್ಗಿ ಸುಮಾರು 15 ಕ್ಕೂ ಹೆಚ್ಚು ಏರ್ ಪೋರ್ಟ್ ಟ್ಯಾಕ್ಸಿ ಚಾಲಕರು ಓಲಾ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಬಜ್ಪೆ ಪೊಲೀಸರು ಸ್ಥಳಕ್ಕಾಗಮಿಸಿ ಕೆಲವು ಏರಪೋರ್ಟ್ ಚಾಲಕರಾದ ಮೊಹಮ್ಮದ್ ತಾಸೀನ್ (50), ಅಬ್ದುಲ್ ರಹಿಮಾನ್ (41) ಮತ್ತು ಉಸ್ಮಾನ್ (38) ವಶಕ್ಕೆ ಪಡೆದಿದ್ದು, ವಿಮಾನ ನಿಲ್ದಾಣದ ಪಾರ್ಕಿಂಗ್ ಯಾರ್ಡಿನಲ್ಲಿ ಬಿಗಿ ಪೋಲಿಸ್ ಬಂದೋಬಸ್ತನು ಏರ್ಪಡಿಸಿದರು.

ಹಲ್ಲೆಗೊಳಗಾದ ರತನ್ ನೀಡಿದ ದೂರಿನಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.