ಮಂಗಳೂರು ವಿವಿ ಕುಲಸಚಿವ  – ಕೆ. ರಾಜು ಮೊಗವೀರ ಅಧಿಕಾರ ಸ್ವೀಕಾರ

Spread the love

ಮಂಗಳೂರು ವಿವಿ ಕುಲಸಚಿವ  – ಕೆ. ರಾಜು ಮೊಗವೀರ ಅಧಿಕಾರ ಸ್ವೀಕಾರ

ಮಂಗಳೂರು : ಹಿರಿಯ ಕೆ.ಎ.ಎಸ್ ಅಧಿಕಾರಿ ಕೆ. ರಾಜು ಮೊಗವೀರ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ  (ಆಡಳಿತ) ಸೋಮವಾರ ಅಧಿಕಾರ ವಹಿಸಿಕೊಂಡರು. ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ನೂತನ ಕುಲಸಚಿವರಿಗೆ ಹೂಗುಚ್ಛ ನೀಡಿ ಬರಮಾಡಿಕೊಂಡರು.

ಈ ಸಂಧರ್ಭದಲ್ಲಿ, ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ. ಎಲ್ ಧರ್ಮ, ಹಣಕಾಸು ಅಧಿಕಾರಿ ಬಿ. ನಾರಾಯಣ, ವಿಶೇಷಾಧಿಕಾರಿಗಳಾದ ಎಂ. ಜಯಶಂಕರ್, ಡಾ. ನಾಗಪ್ಪ ಗೌಡ, ಉಪ ಕುಲಸಚಿವ ಹುಕ್ರಪ್ಪ ನಾಯ್ಕ್, ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಪ್ರೋ ನವೀನ್ ಕುಮಾರ್ ಎಸ್.ಕೆ ಮೊದಲಾದವರು ಉಪಸ್ಥಿತರಿದ್ದರು.


Spread the love