ಮಂಗಳೂರು: ವಿಶ್ವವಿದ್ಯಾನಿಲಯದಿಂದ ವಿಳಂಬವಾಗುತ್ತಿರುವ ಪರೀಕ್ಷಾ ಫಲಿತಾಂಶವನ್ನು ತಕ್ಷಣವೇ ಪ್ರಕಟಿಸುವಂತೆ ಮನವಿ

Spread the love

ಮಂಗಳೂರು: ಈ ಮೇಲಿನ ವಿಷಯಕ್ಕೆ ಸಂಬಂಧಪಟ್ಟಂತೆ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಕ್ತ ಶೈಕ್ಷಣಿಕ ವರ್ಷದ 1, 3 ಹಾಗೂ 5 ನೇ ಸಮಿಸ್ಟರ್ ನ ಪರೀಕ್ಷೆಗಳು ನಡೆದು 2 ತಿಂಗಳುಗಳಾದರೂ ಈವರೆಗೂ ಪರೀಕ್ಷಾ ಫಲಿತಾಂಶವು ಹೊರಬಂದಿರುವುದಿಲ್ಲ, ಇದು ವಿದ್ಯಾರ್ಥಿಗಳ ಭವಿಷ್ಯತ್‍ಗೆ  ತೊಂದರೆಯನ್ನುಂಟು ಮಾಡುತ್ತಿದ್ದು ಹಾಗೂ ವಿದ್ಯಾರ್ಥಿಗಳಲ್ಲಿ ಗೊಂದಲದ ವಾತಾವರಣವನ್ನು ಉಂಟು ಮಾಡುವಲ್ಲಿ ಕಾರಣವಾಗುತ್ತಿದೆ.

ಇದರ ಬಗ್ಗೆ ವಿಶೇಷ ಮುತುವರ್ಜಿಯನ್ನು ವಹಿಸಿ ದಿನಾಂಕ 12.02.2016 ರಂದು ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ ಸಮಿತಿಯ ವತಿಯಿಂದ ಜಿಲ್ಲಾಧ್ಯಕ್ಷರಾದ ಆಶಿತ್ ಜಿ. ಪಿರೇರ ಇವರ ನೇತೃತ್ವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಪ್ರೊ.ಎ.ಎಂ.ಖಾನ್ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.

ashit

ಈ ವೇಳೆ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಮನವರಿಕೆಯನ್ನು ಮಾಡಲಾಯಿತು ಹಾಗೂ ಈ ತಿಂಗಳ 15ರೊಳಗೆ ಎಲ್ಲಾ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಬೇಕೆಂದು ಪ್ರೊ. ಎ.ಎಂ ಖಾನ್ ಇವರಲ್ಲಿ ಮನವಿಯನ್ನು ಮಾಡಲಾಯಿತು. ಮನವಿಗೆ ಸ್ಪಂದಿಸಿದ ಕುಲಸಚಿವರು ಈ ತಿಂಗಳ 15ನೇ ತಾರೀಕಿನೊಳಗೆ ಎಲ್ಲಾ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸುವುದಾಗಿ ಭರವಸೆ ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ಮುಖಂಡರಾದ ಶೌವಾದ್ ಗೂನಡ್ಕ, ಆಸ್ವಿನ್ ಡಿಸೋಜ, ಅಭಿಜಿತ್ ಕೆ.ಆರ್, ಸ್ವಸ್ತಿಕ್ ಸುವರ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Spread the love