ಮಂಗಳೂರು ವಿಶ್ವವಿದ್ಯಾನಿಲಯದ ಭ್ರಷ್ಟಾಚಾರದ ಹಗರಣವನ್ನು ತನಿಖೆ ನಡೆಸಲು ಎಬಿವಿಪಿ ಒತ್ತಾಯ

Spread the love

ಮಂಗಳೂರು ವಿಶ್ವವಿದ್ಯಾನಿಲಯದ ಭ್ರಷ್ಟಾಚಾರದ ಹಗರಣವನ್ನು ತನಿಖೆ ನಡೆಸಲು ಎಬಿವಿಪಿ ಒತ್ತಾಯ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪೆÇ್ರ|| ಬೈರಪ್ಪ್ಪರವರ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಹಗರಣವನ್ನು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘನವೆತ್ತ ರಾಜ್ಯಪಾಲರನ್ನು ಆಗ್ರಹಿಸುತ್ತದೆ.

ನಿವೃತ್ತ ಕುಲಪತಿ ಪೆÇ್ರ|| ಬೈರಪ್ಪನವರ ಐದು ವರ್ಷಗಳ ಅಡಳಿತಾವಧಿಯಲ್ಲಿ ಮಾಧ್ಯಮಗಳು ತಿಳಿಸಿರುವಂತೆ ಪರೀಕ್ಷಾ ನಿರ್ವಹಣಾ ಗುತ್ತಿಗೆ ಹಗರಣ, ಅಂತರಾಷ್ಟ್ರೀಯ ವಿದ್ಯಾರ್ಥಿನಿಲಯ ಗುತ್ತಿಗೆ ಹಗರಣ, ಸೋಲಾರ್ ಟೆಂಡರ್ ಹಗರಣ, ವಿಶ್ವವಿದ್ಯಾನಿಲಯಕ್ಕೆ ಕಂಪ್ಯೂಟರ್ ಖರೀದಿ ಹಗರಣ, ಸಿ.ಸಿ ಟಿವಿ ಟೆಂಡರ್ ಹಗರಣ, ರಾಜ್ಯಪಾಲರ ಅನುಮತಿ ಇಲ್ಲದಿದ್ದರೂ ಅಕ್ರಮ ನೇಮಕಾತಿ ಪ್ರಕರಣ, ವಿವಿ ಆಡಳಿತ ಸೌಧ ಕಟ್ಟಡ, ಸೌಂದರೀಕರಣಕ್ಕೆ ನಕಲಿ ಬ್ಯಾಂಕ್ ಸೆಕ್ಯೂರಿಟಿ ನೀಡಿದ ಹಗರಣ ಹೀಗೆ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ನಡೆದಿದೆಯೆನ್ನಲಾದ ವ್ಯಾಪಕ ಭ್ರಷ್ಟಾಚಾರ ಹಗರಣವನ್ನು ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಟಕ ಸರ್ಕಾರ ಹಾಗೂ ಘನತೆವೆತ್ತ ರಾಜ್ಯಪಾಲರನ್ನು ಈ ಮೂಲಕ ಒತ್ತಾಯಿಸುತ್ತದೆ.


Spread the love