ಮಂಗಳೂರು ವಿ.ವಿ.ಗೆ ಒಂದು ಬೆಳ್ಳಿ, ನಾಲ್ಕು ಕಂಚು 

Spread the love

ಮಂಗಳೂರು ವಿ.ವಿ.ಗೆ ಒಂದು ಬೆಳ್ಳಿ, ನಾಲ್ಕು ಕಂಚು 

ಮಂಗಳೂರು :  ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪೆನ್‍ಕ್ಯಾಕ್ ಸಿಲತ್ ಪಂದ್ಯಾವಳಿ ಜನವರಿ 21 ರಿಂದ 23ರವರೆಗೆ ಗುಲ್ಬರ್ಗ ವಿಶ್ವವಿದ್ಯಾನಿಲಯದಲ್ಲಿ ಜರಗಿತು.

ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾದ ಅನುಷ ಎಚ್.ಎ. 72-75 ಕೆ.ಜಿ. ವಿಭಾಗದಲ್ಲಿ ಬೆಳ್ಳಿಯ ಪದಕ, 65-70 ಕೆ.ಜಿ. ವಿಭಾಗದಲ್ಲಿ ಪವಿತ್ರ ಪಿ.ಬಿ. ಕಂಚಿನ ಪದಕ, ಓಪನ್ ಕೆಟಗರಿಯಲ್ಲಿ ಎಮ್. ನಿಧಿ ಆರ್. ಶೆಟ್ಟಿ ಕಂಚಿನ ಪದಕ, ಆರ್ಟ್‍ಸ್ಟಿಟ್(ಗಾಂಡ)ದಲ್ಲಿ ಸ್ವಾತಿ ಅರುಣ್ ಕುಮಾರ್ ಹಾಗೂ ದೀಪಿಕ ಪಿ.ಎಸ್. ಅವರು ಕಂಚಿನ ಪದಕವನ್ನು ಪಡೆದಿರುತ್ತಾರೆ.

ತಂಡದ ತರಬೇತುದಾರರಾಗಿ ಚಂದ್ರಕಾಂತ್ ಭಟ್, ಯತೀಶ್ ಕುಮಾರ್ ಸಸಿಹಿತ್ಲು ಹಾಗೂ ತಂಡದ ವ್ಯವಸ್ಥಾಪಕರಾಗಿ ಸುರೇಖರವರು ಕಾರ್ಯನಿರ್ವಹಿಸಿರುತ್ತಾರೆ.


Spread the love