ಮಂಗಳೂರು: ವೆನ್‍ಲಾಕ್ ಜಿಲ್ಲಾ ಅಸ್ಪತ್ರೆಗೆ ಜೆ. ಅರ್. ಲೋಬೊ ಭೇಟಿ

Spread the love

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಅರ್. ಲೋಬೊ ಗುರುವಾರ ನಗರದಲ್ಲಿರುವ ವೆನ್‍ಲಾಕ್ ಜಿಲ್ಲಾ ಅಸ್ಪತ್ರೆಗೆ ಭೇಟಿ ನೀಡಿ, ಅಸ್ಪತ್ರೆಯ ಸಮಸ್ಯೆ ಮತ್ತು ಶಾಸಕರಿಗೆ ಬಂದ ಜನರ ಅಹವಾಲುಗಳ ಬಗ್ಗೆ, ಉನ್ನತ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿದರು.

qÉ£À¯ÉÆZÀPÀ'

ಗ್ರೂಪು ‘ಡಿ’ ನೌಕರರ, ಅಹವಾಲಿಗೆ ಸ್ಪಂದಿಸಿದ ಶಾಸಕರು, ನೌಕರರ ವೇತನ ತಡವಾಗಿ ಜಮೆಯಾಗದಂತೆ ಮತ್ತು ವೇತನವನ್ನು ತಿಂಗಳ 5ನೇ ತಾರೀಕಿನ ಒಳಗೆ ಜಮೆ ಮಾಡಲು ಸೂಚಿಸಿದರು.

ಜಿಲ್ಲಾ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಉನ್ನತ ಸಿಬ್ಬಂದಿಯ ಕೊರತೆಯ ವಿಚಾರವನ್ನು ಶಾಸಕರಿಗೆ ತಿಳಿಸಿದರು. ಈ ಬಗ್ಗೆ ಸೂಕ್ತ ಇಲಾಖೆಯಲ್ಲಿ ಅಥವಾ ಸದನದಲ್ಲಿ ಪ್ರಸ್ತಾವಿಸಿ ಸೂಕ್ತ ಕ್ರಮ ಕ್ಯೆಗೊಳ್ಳುವ ಭರವಸೆ ನೀಡಿದರು.

ಈಗಾಗಲೆ ಮುಗಿದಿರುವ, ಸುಮಾರು 20 ಲಕ್ಷ ರೂಪಾಯಿಯ ಒಳಚರಂಡಿ ಕಾಮಗಾರಿಯ ಬಗ್ಗೆ ದೂರುಗಳಿದ್ದು, ಈ ಬಗ್ಗೆ ಪರಿಶೀಲಿಸಿ ಬೇಕಾದಲ್ಲಿ ಲೋಕಾಯುಕ್ತದಿಂದ ತನಿಖೆಮಾಡಲು ಸೂಚಿಸಿದರು.


Spread the love