ಮಂಗಳೂರು: ಶಾಲಾ ವಾಹನಗಳಲ್ಲಿ ಜಿ.ಪಿ.ಎಸ್. ಉಪಕರಣ ಅಳವಡಿಸಲು ಸೂಚನೆ

Spread the love

ಮಂಗಳೂರು: ಇತ್ತೀಚೆಗೆ ಜರುಗಿದ ದ.ಕ. ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಛೇರಿ ವ್ಯಾಪ್ತಿಯಲ್ಲಿ ನೊಂದಾಯಿಸಲ್ಪಟ್ಟು ಸಂಚರಿಸುತ್ತಿರುವ ಎಲ್ಲಾ ಶಾಲಾ ಕಾಲೇಜು ವಾಹನಗಳಲ್ಲಿ ಪ್ರಯಾಣಿಸುವ ಶಾಲಾ ಕಾಲೇಜು ಮಕ್ಕಳ ರಕ್ಷಣೆ ಹಾಗೂ ಇತರ ಕಿರುಕುಳ ನಿವಾರಿಸುವ ಹಿತದೃಷ್ಟಿಯಿಂದ ಜಿ.ಪಿ.ಎಸ್. ಉಪಕರಣಗಳನ್ನು ಕಡ್ಡಾಯವಾಗಿ ಅಳವಡಿಸತಕ್ಕದ್ದೆಂದು ತೀರ್ಮಾನ ತೆಗೆದುಕೊಂಡು ನಿರ್ಣಯಿಸಲಾಗಿರುತ್ತದೆ.

ಆದ್ದರಿಂದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ವಾಹನ (ಶಾಲಾ ಕಾಲೇಜು ವಾಹನಗಳಲ್ಲಿ) ತಕ್ಷಣದಿಂದ ಜಾರಿಗೆ ಬರುವಂತೆ ಕಡ್ಡಾಯವಾಗಿ ಜಿ.ಪಿ.ಎಸ್. ಉಪಕರಣಗಳನ್ನು ಅಳವಡಿಸಿಕೊಂಡು ಕರ್ತವ್ಯನಿರತ ಮೋಟಾರು ವಾಹನ ನಿರೀಕ್ಷಕರ ಸಮ್ಮುಖದಲ್ಲಿ ಈ ಕಛೇರಿಯಲ್ಲಿ ಹಾಜರುಪಡಿಸಿ ದಾಖಲೆಗಳಲ್ಲಿ ದೃಢೀಕರಣ ಪಡೆದು ತಮ್ಮ ವಾಹನಗಳ ಬಾಬ್ತು ತಪ್ಪದೇ ಪರವಾನಿಗೆಗಳಲ್ಲಿ ನಮೂದಿಸಿಕೊಳ್ಳತಕ್ಕದ್ದೆಂದು ಈ ಮೂಲಕ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಈ ಪ್ರಕ್ರಿಯೆಯನ್ನು ಮೇ 2015 ರ ಅಂತ್ಯದೊಳಗೆ ಪೂರೈಸಿಕೊಳ್ಳುವಂತೆ ಸೂಚಿಸಲಾಗಿದೆ.

ಇದಕ್ಕೆ ತಪ್ಪಿದಲ್ಲಿ ಸಂಬಂಧಪಟ್ಟ ಶಾಲಾ ಕಾಲೇಜುಗಳ ವಾಹನಗಳ ಮಾಲಿಕರು ಭಾರತೀಯ ದಂಡ ಸಂಹಿತೆ 188 ರ ಪ್ರಕಾರ ದಂಡನಾರ್ಹರಾಗಿರುತ್ತಾರೆ ಹಾಗೂ ಅವರ ವಿರುದ್ಧ ಪ್ರಾಧಿಕಾರವು ವಿಧಿಸಬಹುದಾದ ಇತರ ಶಿಸ್ತುಕ್ರಮಕ್ಕೆ ಅರ್ಹರಾಗಿರುತ್ತಾರೆ ಎಂದು ಈ ಮೂಲಕ ತಿಳಿಸಲಾಗಿದೆ.


Spread the love